More

    29, 30 ರಂದು ಕೊಲ್ಹಾರದಲ್ಲಿ ದ್ಯಾಮವ್ವ, ದುರ್ಗವ್ವ ಜಾತ್ರೆ

    ಕೊಲ್ಹಾರ: ಪಟ್ಟಣದ ಆದಿಶಕ್ತಿ ದ್ಯಾಮವ್ವ ಹಾಗೂ ದುರ್ಗಾ ಮಾತೆಯ ಉಡಿ ತುಂಬುವ ಕಾರ್ಯಕ್ರಮವನ್ನು ಮೇ 29 ಹಾಗೂ 30ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ ತಿಳಿಸಿದರು.

    ಈ ಕುರಿತು ಗುರುವಾರ ರಾತ್ರಿ ಏರ್ಪಡಿಸಿದ್ದ ಪಟ್ಟಣದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಮೇ 29ರಂದು ದೇವಸ್ಥಾನದ ಆವರಣದಲ್ಲಿ ಹಂದರ ತಪ್ಪಲ ಹಾಕುವುದು. ಅಂದು ಸಂಜೆ ಎತ್ತಿನಬಂಡಿಯಲ್ಲಿ ಹಂದರ ತಪ್ಪಲದ ಮೆರವಣಿಗೆ ಜರುಗಲಿದೆ.

    ದೇವಿ ಆರಾಧನೆಯ ವಾರ ಹಿಡಿದಿರುವುದನ್ನು ಮಂಗಳವಾರಕ್ಕೆ ಕೊನೆಗೊಳಿಸಲಾಗುವುದು. ಇದರ ಹಿನ್ನೆಲೆಯಲ್ಲಿ ಊರಿನ ಪ್ರಮುಖ ಸ್ತ್ರೀ ದೇವತೆಗಳ ಹಾಗೂ ದ್ಯಾಮವ್ವದೇವಿಯ ಉಡಿತುಂಬುವ ಕಾರ್ಯಕ್ರಮವು ಅಂದು ಬೆಳಗ್ಗೆ ದೇವಸ್ಥಾನದಿಂದ ದೇವಿಯ ಮೂರ್ತಿಗಳನ್ನು ಎರಡು ಎತ್ತಿನ ಬಂಡಿಗಳಲ್ಲಿ ಕೃಷ್ಣಾ ನದಿಗೆ ತೆಗೆದುಕೊಂಡು ಹೋಗಿ ಅಲ್ಲಿ ಜಲರುದ್ರಾಭಿಷೇಕವನ್ನು ಮುಗಿಸಿಕೊಂಡು ವೇದ ಮಂತ್ರದೊಂದಿಗೆ ಉಡಿ ತುಂಬಿ ಸಂಜೆ 4ಕ್ಕೆ ದೇವತೆಗಳು ಪುರ ಪ್ರವೇಶ ಮಾಡುವರು.

    ಪುರಪ್ರವೇಶ ಸಮಯದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯು ಸಕಲ ವಾದ್ಯ ವೈಭವಗಳೊಂದಿಗೆ ಡೊಳ್ಳು ಕುಣಿತದ ಸದ್ದಿನೊಂದಿಗೆ ಮಡಿಯಿಂದ ಯುವಕರು ಎತ್ತಿನ ಬಂಡಿಯನ್ನು ಭಂಡಾರ ಸಮರ್ಪಣೆಗೈಯುವ ಮೂಲಕ ದೇವಸ್ಥಾನದವರೆಗೆ ನೂರಾರು ಭಕ್ತ ಸಮ್ಮುಖದಲ್ಲಿ ಸಾಗಿ ಬರುವುದು. ಆಗ ಊರಿನ ಹೆಣ್ಣು ಮಕ್ಕಳು ದೇವಿಗೆ ಉಡಿ ತುಂಬುವರು ನಂತರ ದೇವಸ್ಥಾನದಲ್ಲಿ ದೇವಿಯ ಜಾತ್ರೆಯಲ್ಲಿ ಭಕ್ತರು ಪಾಲ್ಗೊಳ್ಳುವರು.

    ಪೂರ್ವಭಾವಿ ಸಭೆಯಲ್ಲಿ ಈರಯ್ಯ ಮಠಪತಿ, ಶಶಿಧರ ದೇಸಾಯಿ, ಗುರಪ್ಪ ಗಣಿ, ಶೇಕಪ್ಪ ಗಾಣಿಗೇರ, ಶ್ರೀಕಾಂತ ಬರಗಿ, ಬಸಪ್ಪ ಗಾಜಿ, ಶ್ರೀಶೈಲ ಅಥಣಿ, ಸುಭಾಸ ಭಜಂತ್ರಿ, ಮಂಜುನಾಥ ತುಂಬರಮಟ್ಟಿ, ಶ್ರೀಶೈಲ ಉಪ್ಪಲದಿನ್ನಿ, ನಾಮದೇವ ಪವಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts