ಅಬುಧಾಬಿ: ‘ಯುನಿವರ್ಸಲ್ ಬಾಸ್’ ಖ್ಯಾತಿಯ ಕ್ರಿಸ್ ಗೇಲ್ ಹಾಗೂ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೊ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಶನಿವಾರ ವಿದಾಯ ಘೋಷಿಸಿದರು. 42 ವರ್ಷದ ಕ್ರಿಸ್ ಗೇಲ್ ಅಧಿಕೃತಾಗಿ ವಿದಾಯ ಘೋಷಿಸಿಲ್ಲವಾದರೂ 15 ರನ್‌ಗಳಿಸಿ ಔಟಾದ ಬಳಿಕ ಡಗೌಟ್ ಕಡೆಗೆ ಬರುವಾಗ ಪ್ರೇಕ್ಷಕರ ಕಡೆಗೆ ಬ್ಯಾಟ್ ಎತ್ತಿದರೆ, ಸಹ ಆಟಗಾರರು ಕೂಡ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಪಂದ್ಯ ಮುಗಿದ ಬಳಿಕ ಗೇಲ್ ಹಾಗೂ ಬ್ರಾವೊಗೆ ಸಹ-ಆಟಗಾರರು ಸೇರಿದಂತೆ ಆಸೀಸ್ ಆಟಗಾರರು ಕೂಡ ಅಭಿನಂದಿಸಿದರು. ಇಬ್ಬರೂ ಆಟಗಾರರು ಇನ್ಮುಂದೆ ಕೇವಲ ಟಿ20 ಲೀಗ್‌ಗಳಲ್ಲಷ್ಟೇ ಮುಂದುವರಿಯಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 1045 ಸಿಕ್ಸರ್ ಸಿಡಿಸಿರುವ ಗೇಲ್, ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕಡೇ ಬಾರಿಗೆ ಗೇಲ್ ಅವರನ್ನು ವೆಸ್ಟ್ ಇಂಡೀಸ್ ಜೆರ್ಸಿಯಲ್ಲಿ ಕಾಣುತ್ತಿದ್ದೇವೆ ಎಂದು ವೀಕ್ಷಕ ವಿವರಣೆಗಾರ ಇಯಾನ್ ಬಿಷಪ್ ತಿಳಿಸಿದರು. ಭಾರತದ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಕ್ರಿಕೆಟ್ ಸಮೂಹ ಗೇಲ್ ಸಾಧನೆಯನ್ನು ಅಭಿನಂದಿಸಿದೆ. 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಗೇಲ್, 2 ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ. 79 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ 1899 ರನ್ ಸಿಡಿಸಿದ್ದಾರೆ. ಒಟ್ಟಾರೆ, 445 ಟಿ20 ಇನಿಂಗ್ಸ್‌ಗಳಿಂದ, 22 ಶತಕ ಸೇರಿದಂತೆ 14,321 ಬಾರಿಸಿದ್ದು, 2013ರಲ್ಲಿ ಆರ್‌ಸಿಬಿ ಪರ ಕೇವಲ 66 ಎಸೆತಗಳಲ್ಲಿ 175 ರನ್ ಗಳಿಸಿರುವುದು ವಿಶ್ವದಾಖಲೆಯಾಗಿದೆ.
* ಬ್ರಾವೊ ವಿದಾಯ: 34 ವರ್ಷದ ಡ್ವೇನ್ ಬ್ರಾವೊ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. 2004ರ ಏಪ್ರಿಲ್‌ನಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬ್ರಾವೊ, ಅದೇ ವರ್ಷ ಟೆಸ್ಟ್ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದರು. ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. 90 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ 4 ಅರ್ಧಶತಕ ಸೇರಿದಂತೆ 1245 ರನ್ ಬಾರಿಸಿದ್ದು, 78 ವಿಕೆಟ್ ಕಬಳಿಸಿದ್ದಾರೆ. 2010ರಲ್ಲಿ ಕಡೇ ಬಾರಿಗೆ ಟೆಸ್ಟ್ ಹಾಗೂ 2014ರಲ್ಲಿ ಕಡೇ ಬಾರಿಗೆ ಏಕದಿನ ಪಂದ್ಯವಾಡಿದ್ದರು.
Two absolute greats of the format 🐐 #T20WorldCup | #AUSvWI pic.twitter.com/goggQA8DPW
— ICC (@ICC) November 6, 2021
Combined international numbers of Dwayne Bravo and Chris Gayle 👇
💥 Matches ➜ 775
💥 Runs ➜ 25961
💥 50-plus scores ➜ 178
💥 Wickets ➜ 623
💥 Catches ➜ 397Legends of the game ✨#T20WorldCup | #WestIndies pic.twitter.com/86TwLDxAxd
— ESPNcricinfo (@ESPNcricinfo) November 6, 2021