ಪುತ್ತೂರು: ಕಾನೂನು ಬದ್ಧವಾಗಿ ಶ್ರೀಮಂತಿಕೆಯನ್ನು ಸಂಪಾದಿಸುವುದು ದೇಶಕ್ಕೆ ದೊಡ್ಡ ಆರ್ಥಿಕತೆ ನಿರ್ಮಿಸಿದಂತಾಗುತ್ತದೆ. ವ್ಯವಹಾರ ನಡೆಸುವ ಮೂಲಕ ಉದ್ಯೋಗ ಸೃಷ್ಟಿಸಿ ಸಮಾಜಕ್ಕೆ ಕೊಡುಗೆ ನೀಡುವುದೂ ದೊಡ್ಡ ಸಮಾಜ ಸೇವೆಯಾಗಿದೆ. ದ್ವಾರಕಾ ಸಂಸ್ಥೆಯ ಮುಖಾಂತರ ದೇಶ, ಸಮಾಜಕ್ಕೆ ಸಂಬಂಽಸಿದ ಹತ್ತಾರು ಕ್ಷೇತ್ರದಲ್ಲಿ ಸೇವೆಯ ಮೂಲಕ ಗೋಪಾಲಕೃಷ್ಣ ಭಟ್ ಶ್ರೀಮಂತಿಕೆಯನ್ನು ಸಮಾಜಕ್ಕೆ ಸದ್ವನಿಯೋಗ ಮಾಡುತ್ತಿದ್ದಾರೆ ಎಂದು ಹಿರಿಯ ಆರ್ಥಿಕ ತಜ್ಞ ವಿಶ್ವೇಶ್ವರ ಭಟ್ ಬಂಗಾರಡ್ಕ ಹೇಳಿದರು.
ಮುಕ್ರಂಪಾಡಿಯ ಗೋಕುಲ ಬಡಾವಣೆಯಲ್ಲಿ ದ್ವಾರಕಾ ಕಾರ್ಪೋರೇಷನ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನದ ವತಿಯಿಂದ ೫ನೇ ವರ್ಷದ ‘ದ್ವಾರಕೋತ್ಸವ’-೨೦೨೫ ಸನ್ಮಾನ, ಪ್ರತಿಭಾ ಪುರಸ್ಕಾರ, ದ್ವಾರಕಾ ಪ್ರಕಾಶನದಿಂದ ಹೊಸ ಪುಸ್ತಕಗಳ ಬಿಡುಗಡೆ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ತಜ್ಞ, ಆಪ್ತ ಸಲಹೆಗಾರ ಡಾ.ಸುಲೇಖಾ ವರದರಾಜ್, ಮಿತ್ತೂರು ಬ್ರಹ್ಮಶ್ರೀ ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಬಿ., ಕೃತಿಕಾರ ಕೃಷ್ಣ ಮೂರ್ತಿ ಕೆಮ್ಮಾರ, ಸತೀ ಸಾವಿತ್ರಿ ಕೃತಿಕಾರ ಗ.ನಾ ಭಟ್ಟ ಮೈಸೂರು ಮಾತನಾಡಿದರು. ದ್ವಾರಕಾ ಪ್ರರಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅಧ್ಯಕ್ಷತೆ ಅರ್ತ್ಯಡ್ಕ ವಹಿಸಿದ್ದರು.
ದುರ್ಗಾ ಗಣೇಶ್ ಪ್ರಾರ್ಥಿಸಿದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ್ಯ ಕುಂಬ್ಳೆ ಸ್ವಾಗತಿಸಿದರು. ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಪ್ರಾಸ್ತಾವನೆಗೈದರು. ಅಮೃತ ಕೃಷ್ಣಾ ವಂದಿಸಿದರು. ನವೀನಕೃಷ್ಣಾ ಉಪ್ಪಿನಂಗಡಿ ಹಾಗೂ ಶ್ರೀದೇವಿ ನಿರೂಪಿಸಿದರು.
ಪುಸ್ತಕ ಪರಿಚಯ-ಬಿಡುಗಡೆ
ಗ.ನಾ.ಭಟ್ ರಚಿಸಿದ ಸತೀ ಸಾವಿತ್ರಿ ಪುಸ್ತಕವನ್ನು ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಪರಿಚಯ ಮಾಡಿದರು. ಕೃಷ್ಣಮೂರ್ತಿ ಕೆಮ್ಮಾರ ಅವರ ಪುರಾಣ ರಸಪ್ರಶ್ನಾವಲೀಯ ಯುವ ಬರಹಗಾರ ನವೀನಕೃಷ್ಣ ಎಸ್. ಉಪ್ಪಿನಂಗಡಿ ಪರಿಚಯಿಸಿದರು. ಮಿತ್ತೂರು ಪುರೋಹಿತ ಶ್ರೀನಿವಾಸ ಭಟ್ಟ ಪರಿಷ್ಕರಣೆ ಮತ್ತು ಪರಿವರ್ಧನೆ ಮಾಡಿದ ವೇದವಸಮಂತ ಮತ್ತು ವೇದ ಮಾಧವ ಎಂಬ ಕೃತಿ ಬಿಡುಗಡೆಯಾಗಿತು. ಪುಸ್ತಕ ಬಿಡುಗಡೆಯನ್ನು ವಿವೇಕಾನಂದ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ.ನಡೆಸಿದರು.
ಸನ್ಮಾನ, ಪ್ರತಿಭಾ ಪುರಸ್ಕಾರ
ಸಾವಯವ ಕೃಷಿ ಕ್ಷೇತ್ರದ ಸಾಧಕ ಸುಬ್ರಹ್ಮಣ್ಯ ಭಟ್ಟ ನೆಕ್ಕರೆಕಳೆಯ, ಭಾರತೀಯ ಸೇನೆ, ಕೃಷಿ ಹಾಗೂ ಸಮಾಜ ಸೇವೆಯಲ್ಲಿ ಡಾ.ಗೋಪಾಲ ಕೃಷ್ಣ ಕಾಂಚೋಡು, ಯಕ್ಷಗಾನ ಹಿಮ್ಮೇಳದಲ್ಲಿ ಪದ್ಯಾಣ ಶಂಕರನಾಎಆಯಣ ಭಟ್ಟ, ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಸ್ವಸ್ತಿಕ್ ಭಟ್ ಮುರ್ಗಜೆ, ಸಾಮಾಜಿಕ ಜಾಲತಾಣ ಹಾಗೂ ಆಹಾರೋದ್ಯಮದಲ್ಲಿ ಸುದರ್ಶನ ಭಟ್ಟ ಬೆದ್ರಡಿಯವರನ್ನು ಸನ್ಮಾನಿಸಲಾಯಿತು. ದ್ವಾರಕ ಕಲಾ ಶಾಲೆಯ ಮೂಲಕ ಕೀಬೋರ್ಡ್, ಚೆಂಡೆ, ಮದ್ದಳೆ ತರಬೇತಿ ಪಡೆದ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ರಾಮಾಯಣ, ಮಹಾಭಾರತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿ
ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಗೋಪಾಲಕೃಷ್ಣ ಕಾಂಚೋಡು ಕೃಷಿಯಲ್ಲಿ ಅಡಕೆಗೆ ಪರ್ಯಾಯ, ವಿಶ್ವೇಶ್ವರ ಭಟ್ ಬಂಗಾರಡ್ಕ ರಿಯಲ್ ಎಸ್ಟೇಟ್ ಮತ್ತು ಆರ್ಥಿಕತೆ ಹಾಗೂ ಸುಬ್ರಹ್ಮಣ್ಯ ಪ್ರಸಾದ ಭಟ್ಟ ನೆಕ್ಕರಕಳೆ ದೇಶೀ ಗೋವು ಮತ್ತು ಗನ್ಯೋತ್ಪನ್ನಗಳ ಕುರಿತು ವಿಷಯ ಮಂಡಿಸಿದರು. ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಬು ಕಾಟುಕುಕ್ಕೆ ಮತ್ತು ದ್ವಾರಕಾ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಕೀ-ಬೋರ್ಡ್ ವಾದನ, ಗಣರಾಜ ಕುಂಬ್ಳೆ ನಿರ್ದೇಶನದಲ್ಲಿ ಚೂಡಾಮಣಿ ಯಕ್ಷಗಾನ ತಾಳಮದ್ದಳೆ, ಸಂಜೆ ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾನಭೂಷಣ ವಿದ್ವಾನ ವೆಂಕಟಕೃಷ್ಣ ಭಟ್ ಗುಂಡ್ಯಡ್ಕ ಮತ್ತು ಬಳಗದವರಿಂದ ‘ಭಾವ ಗಾನ ಲಹರಿ’ ಹಾಗೂ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ದೀಪಕ್ ಕುಮಾರ್ ಮತ್ತು ಶಿಷ್ಯರಿಂದ ಮಧುರಾಕೃತಿ-ಶ್ರೀಕೃಷ್ಣ ಲೀಲೆಗಳು ನೃತ್ಯರೂಪಕ ನಡೆಯಿತು.