ಡಿಕೆ ಬ್ರದರ್ಸ್ ಹುನ್ನಾರಕ್ಕೆ ನಾವು ಬಲಿಯಾಗಿದ್ದು ನಿಜ: ಡಿವಿಎಸ್​

ಕೋಲಾರ: ಡಿಕೆ ಬ್ರದರ್ಸ್ ಹುನ್ನಾರಕ್ಕೆ ನಾವು ಬಲಿಯಾಗಿದ್ದು ನಿಜ. ಚಂದ್ರಶೇಖರ್​ ಕಾಂಗ್ರೆಸ್​ನಿಂದ ಬಂದು ಅದೇ ಪಕ್ಷದ ಬುದ್ಧಿ ತೋರಿಸಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ.

ನಮ್ಮ ಅಭ್ಯರ್ಥಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರಿಂದ ನಮಗೆ ಹಿನ್ನಡೆ ಆಗಿರುವುದು ಸತ್ಯ. ಆದರೆ, ನಮ್ಮ ಪಕ್ಷಕ್ಕೆ ಯಾವುದೇ ಧಕ್ಕೆ ಇಲ್ಲ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇವೆ ಎಂದರು.

ಕಾಂಗ್ರೆಸ್​ನ ಕೊನೆ ದಿನಗಳು ಈ ರೀತಿ ಕಾಣಿಸುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಿ ಅಧಿಕಾರಕ್ಕೇರಲು ಕಾಂಗ್ರೆಸ್​ ಮುಂದಾಗಿದೆ. ಇದನ್ನು ಚಂದ್ರಶೇಖರ್​ ಅವರ ತಂದೆ ಲಿಂಗಪ್ಪ ಅವರೇ ಹೇಳಿದ್ದಾರೆ. ಚಂದ್ರಶೇಖರ್​ ನನ್ನ ಮಗನೇ ಅಲ್ಲ, ದ್ರೋಹಿ, ನಾಲಾಯಕ್ ಎಂದಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್)