ಕರ್ತವ್ಯ ಲೋಪ, ಶಿಕ್ಷಕ ಅಮಾನತು

ಹೂವಿನಹಡಗಲಿ: ಕರ್ತವ್ಯ ಲೋಪ ಹಾಗೂ ದುರ್ವತನೆ ಹಿನ್ನೆಲೆಯಲ್ಲಿ ತಮಲಾಪುರ ಸಪ್ರಾ ಶಾಲೆ ಶಿಕ್ಷಕ ಎಲ್.ವಿ.ಗುಡ್ಯಾನಾಯ್ಕನನ್ನು ಅಮಾನತುಗೊಳಿಸಿ ಬಿಇಒ ನಾಗರಾಜ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಪ್ರಾರ್ಥನಾ ಸಮಯಕ್ಕೆ ತಮಲಾಪುರ ಶಾಲೆಗೆ ಸೋಮವಾರ (ಫೆ.18) ಭೇಟಿ ನೀಡಿದ್ದಾಗ ಎಲ್.ವಿ.ಗುಡ್ಯಾನಾಯ್ಕ ಗೈರು ಹಾಜರಾಗಿದ್ದರು. ಮಂಗಳವಾರ ಶಾಲೆಗೆ ತೆರಳಿದ್ದಾಗ ಎಲ್.ವಿ.ಗುಡ್ಯಾನಾಯ್ಕ ಶಾಲೆಗೆ ಆಗಮಿಸಿದ್ದರೂ ಪ್ರಾರ್ಥನೆಗೆ ಗೈರಾಗಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಬಿಇಒ ನಾಗರಾಜ ತಿಳಿಸಿದ್ದಾರೆ.