ವರ್ಲ್ಡ್ ಯುನಿವರ್ಸಿಟಿ ಸ್ಪರ್ಧೆಯಲ್ಲಿ ದ್ಯುತಿ ಚಿನ್ನ

ನಪೊಲಿ(ಇಟಲಿ): ರಾಷ್ಟ್ರೀಯ ದಾಖಲೆ ಹೊಂದಿರುವ ದ್ಯುತಿ ಚಂದ್ ಇಟಲಿಯ ನಪೊಲಿಯಲ್ಲಿ ನಡೆಯುತ್ತಿರುವ ವರ್ಲ್ಡ್ ಯುನಿವರ್ಸಿಟಿ ಕ್ರೀಡಾಕೂಟದಲ್ಲಿ ಮಹಿಳೆಯರ 100 ಮೀಟರ್ ಓಟದಲ್ಲಿ ಸ್ವರ್ಣ ಜಯಿಸುವ ಮೂಲಕ ಇತಿಹಾಸ ನಿರ್ವಿುಸಿದ್ದಾರೆ. ಕೂಟದ ಟ್ರಾ್ಯಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಸ್ವರ್ಣ ಗೆದ್ದ ಭಾರತದ ಮೊಟ್ಟ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದಾರೆ. 23 ವರ್ಷದ ದ್ಯುತಿ ಚಂದ್ 11.32 ಸೆಕೆಂಡ್​ಗಳಲ್ಲಿ 100 ಮೀಟರ್ ಓಟವನ್ನು ಕ್ರಮಿಸಿದರು. ನಾಲ್ಕನೇ ಲೇನ್​ನಲ್ಲಿ ಓಡಿದ ದ್ಯುತಿ ಸ್ವಿಜರ್ಲೆಂಡ್​ನ ಡೆಲ್ ಪಾಂಟೆ (11.33ಸೆ) ಅವರನ್ನು ಕೂದಲೆಳೆ ಅಂತರದಲ್ಲಿ ಹಿಂದಿಕ್ಕುವ ಮೂಲಕ ಐತಿಹಾಸಿಕ ಸಾಧನೆ ಮೆರೆದರು. ಒಡಿಶಾದ ಓಟಗಾರ್ತಿ ದ್ಯುತಿ 11.24 ಸೆಕೆಂಡ್​ಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆ ನಿರ್ವಿುಸಿದ್ದರು. ಹಿಮಾ ದಾಸ್ ಬಳಿಕ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಸ್ವರ್ಣ ಜಯಿಸಿದ ಭಾರತದ 2ನೇ ಅಥ್ಲೀಟ್ ಎನಿಸಿದ್ದಾರೆ. ಹಿಮಾ ದಾಸ್ ಕಳೆದ ವರ್ಷ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನಲ್ಲಿ 400 ಮೀಟರ್ ಓಟದಲ್ಲಿ ಸ್ವರ್ಣ ಗೆದ್ದಿದ್ದರು.

ರಾಷ್ಟ್ರಪತಿ ಅಭಿನಂದನೆ: ಭುವನೇಶ್ವರದ ಕಳಿಂಗಾ ಇನ್​ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯ ವಿದ್ಯಾರ್ಥಿನಿಯಾಗಿರುವ ದ್ಯುತಿ ಚಂದ್ ಸಾಧನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಕ್ರೀಡಾ ಸಚಿವ ಕಿರಣ್ ರಿಜಿಜು ಸೇರಿದಂತೆ ದೇಶದ ಗಣ್ಯರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *