ಮಂಡ್ಯ: ಕಳೆದ ಹತ್ತು ವರ್ಷದಿಂದ ಮಂಡ್ಯ ಯೂತ್ ಗ್ರೂಪ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮಂಡ್ಯ ದಸರಾ ಸಾಂಸ್ಕೃತಿಕ ಉತ್ಸವ ವಿಜಯದಶಮಿ ದಿನವಾದ ಅ.12ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ಗ್ರೂಪ್‌ನ ಅಧ್ಯಕ್ಷ ಡಾ.ಅನಿಲ್ ಆನಂದ್ ಹೇಳಿದ್ದಾರೆ.
ಅಂದು ಮಧ್ಯಾಹ್ನ 3.15ರಿಂದ 3.50ರೊಳಗೆ ಸಲ್ಲುವ ಶ್ರವಣನಕ್ಷತ್ರ ಕುಂಭ ಲಗ್ನದಲ್ಲಿ ಕಾಳಿಕಾಂಬ ದೇವಾಲಯದ ಬಳಿಯ ಗಜೇಂದ್ರಮೋಕ್ಷ ಕೊಳದ ಆವರಣದಲ್ಲಿರುವ ಬನ್ನಿಮರಕ್ಕೆ ಶಾಸಕ ರವಿಕುಮಾರ್ ಗಣಿಗ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವರು. ನಂತರ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸುವ ಚಾಮುಂಡೇಶ್ವರಿ ವಿಗ್ರಹಕ್ಕೆ ಡಾ.ಅನಿಲ್ ಆನಂದ್ ಪೂಜೆ ನೆರವೇರಿಸಿ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಲಾಗುವುದು ಎಂದಿದ್ದಾರೆ.
ಮೆರವಣಿಗೆಗೆ ಆಕರ್ಷಕ ಜಾನಪದ ಕಲಾತಂಡಗಳು ಸಾಥ್ ನೀಡಲಿವೆ. ನಾದಸ್ವರ, ಕೇರಳ ಚಂಡೆ, ಭದ್ರಕಾಳಿ ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಚಿಲಿಪಿಲಿಗೊಂಬೆ, ನಾಗರಹೊಳೆ ಜೇನುಕುರುಬರ ಕುಣಿತ, ಸೋಮನ ಕುಣಿತ, ವೀರಮಕ್ಕಳ ಕುಣಿತ, ಬೆಂಕಿ ಭರಾಟೆ, ದೊಣ್ಣೆವರಸೆ, ಕೋಳಿಗೊಂಬೆ, ಹುಲಿವೇಷ, ಗೊರವರ ಕುಣಿತ, ಬಂಡೂರು ಕುರಿ, ಶ್ರೀರಂಗಪಟ್ಟಣ ಡ್ರಮ್ಸ್, ತಮಟೆ, ನಗಾರಿ, ಕಂಸಾಳೆ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಮೆರವಣಿಗೆ ಕಾಳಿಕಾಂಬ ದೇವಾಲಯದ ಆವರಣದಿಂದ ಹೊರಟು ಎಸ್.ಡಿ.ಜಯರಾಂ ವೃತ್ತದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿ ಅಲ್ಲಿಂದ ಮಹಾವೀರ ವೃತ್ತ ತಲುಪಲಿದೆ. ನಂತರ ವಿ.ವಿ.ರಸ್ತೆ ಮಾರ್ಗವಾಗಿ ಹೊಸಹಳ್ಳಿ ವೃತ್ತಕ್ಕೆ ಆಗಮಿಸಲಿದೆ. ಬಳಿಕ ನೂರಡಿ ರಸ್ತೆ ಮಾರ್ಗವಾಗಿ ತೆರಳಿ ಬನ್ನೂರು ರಸ್ತೆ ಮೂಲಕ ಚಾಮುಂಡೇಶ್ವರಿ ದೇವಾಲಯದ ಬಳಿ ಮೆರವಣಿಗೆ ಅಂತ್ಯಗೊಳ್ಳಲಿದೆ ಎಂದಿದ್ದಾರೆ. ಗ್ರೂಪ್ ಪದಾಧಿಕಾರಿಗಳು ಶ್ವೇತ ವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೆರವಣಿಗೆಯುದ್ದಕ್ಕೂ ಜತೆಯಾಗಿ ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಮುನ್ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವರಾತ್ರಿ ಹಬ್ಬದ ಸಂಭ್ರಮ: ಅ.12ರಂದು ನಗರದಲ್ಲಿ ಮಂಡ್ಯ ದಸರಾ
You Might Also Like
Skin Care | ಚಳಿಗಾಲದಲ್ಲಿ ತ್ವಚೆ ಆರೈಕೆಗಾಗಿ ಅಲೋವೆರಾ ಫೇಸ್ಪ್ಯಾಕ್; ನೀವೊಮ್ಮೆ ಟ್ರೈ ಮಾಡಿ
ಚಳಿಗಾಲ ಆರಂಭವಾಯಿತು ಎಂದರೆ ಸಾಕು ತ್ವಚೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುವುದನ್ನು ನಾವು ನೊಡಬಹುದು. ಇನ್ನು ಮುಖದ…
15 ನಿಮಿಷದಲ್ಲಿ ತಯಾರಿಸಿ ಟೊಮೆಟೊ ಸಾಸ್; ಇಲ್ಲಿದೆ ನೋಡಿ ಮಾಡುವ ಸಿಂಪಲ್ Recipe
ಕೆಲವು ಪದಾರ್ಥಗಳು ಅಂಗಡಿಯಿಂದ ತಂದರೆ ಮಾತ್ರ ರುಚಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಟೊಮೆಟೊ ಸಾಸ್ ಕೂಡ…
ಕಿಡ್ನಿ ಸ್ಟೋನ್ನಿಂದ ಬಳಲುತ್ತಿದ್ದೀರಾ?; ಹಾಗಾದ್ರೆ ಈ ಆಹಾರ ಪದಾರ್ಥಗಳಿಂದ ಅಂತರ ಕಾಯ್ದುಕೊಳ್ಳಿ | Health Tips
ನಿಮಗೆ ಮೂತ್ರಪಿಂಡದಲ್ಲಿ ನೋವು ಕಾಣಿಸಿಕೊಂಡರೆ ಅದು ಕಲ್ಲುಗಳ ಸಂಕೇತವಾಗಿರಬಹುದು. ವೈದ್ಯರ ಬಳಿ ತಪಾಸಣೆ ಮಾಡಿಸಿದರೆ ಒಳಿತು.…