ದುರ್ಗಾಪರಮೇಶ್ವರಿ ಬ್ರಹ್ಮರಥೋತ್ಸವ ಸಡಗರ

blank

ಕೆ.ಆರ್.ನಗರ: ತಾಲೂಕಿನ ಹಂಪಾಪುರ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ನೆರವೇರಿತು.

ರಥೋತ್ಸವ ಮತ್ತು ಜಾತ್ರಾ ಮಹೋತ್ಸವದಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದರು. ಮಧ್ಯಾಹ್ನ 12 ರಿಂದ 12.30ಕ್ಕೆ ನಡೆದ ಬ್ರಹ್ಮರಥೋತ್ಸವಕ್ಕೂ ಮುನ್ನ ದೇವರನ್ನು ಅಲಂಕರಿಸಿ ಉಯ್ಯಲೆ ಆಡಿಸುತ್ತಾ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಧಾರ್ಮಿಕ ವಿಧಿ ವಿಧಾನದಂತೆ ನಡೆದ ಪೂಜಾ ಕಾರ್ಯಕ್ರಮಗಳ ನಂತರ ಶಾಸಕ ಡಿ.ರವಿಶಂಕರ್ ಹಾಗೂ ನೆರೆದಿದ್ದ ಭಕ್ತರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ದೇವರಿಗೆ ಜೈಕಾರ ಹಾಕುತ್ತಾ ರಥ ಎಳೆಯುವ ಮೂಲಕ ಅಮ್ಮನವರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಬಿಸಿಲ ನಡುವೆಯೂ ಸೇರಿದ್ದ ಯುವಕರು, ಗ್ರಾಮದ ಹಿರಿಯರು ಹಾಗೂ ವಿವಿಧೆಡೆಗಳಿಂದ ಆಗಮಿಸಿದ್ದ ಭಾರಿ ಸಂಖ್ಯೆಯ ಭಕ್ತರು ದೇವಿಗೆ ಜೈಕಾರ ಹಾಕುತ್ತಾ ದೇವಾಲಯದ ಸುತ್ತ ರಥ ಎಳೆದು ತಂದು ನಿಲ್ಲಿಸಿದರು. ಮಹಿಳೆಯರು ದೇವರಿಗೆ ತಂಬಿಟ್ಟು ಆರತಿ ಮತ್ತು ಹಣ್ಣು ಕಾಯಿ ನೈವೇದ್ಯ ನೀಡಿ ಪೂಜೆ ಸಲ್ಲಿಸಿದರು. ಯುವಕರು ಹಾಗೂ ಯುವತಿಯರು ರಥದ ಮೇಲೆ ಹಣ್ಣು ಧವನ ಎಸೆದು ದೇವರಲ್ಲಿ ಪ್ರಾರ್ಥಿಸಿದರು.

ದೇವಸ್ಥಾನದ ಸುತ್ತಮುತ್ತ ತೋರಣಗಳು, ಅಲಂಕೃತ ವಿದ್ಯುದೀಪಗಳು ಕಂಗೊಳಿಸುತ್ತಿದ್ದರೆ ಗ್ರಾಮದ ಪ್ರತಿ ಮನೆಗಳ ಮುಂದೆ ಚಿತ್ತಾಕರ್ಷಕ ರಂಗೋಲಿಗಳು ಕಾಣಿಸಿದವು.

ಗ್ರಾಮದ ವಿವಿಧ ಸಂಘ ಸಂಸ್ಥೆಗಳವರು ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ, ಪಾನಕ, ಮಜ್ಜಿಗೆ ವಿತರಣೆ ಮಾಡಿದರು.

ಶಾಸಕ ಡಿ.ರವಿಶಂಕರ್ ಮಾತನಾಡಿ, ತಾಲೂಕಿನ ಹಂಪಾಪುರ ಗ್ರಾಮದ ಎಲ್ಲಾ ಜನಾಂಗದ ಆರಾಧ್ಯ ದೇವತೆ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಜಾತ್ರೆಗೆ ಭಕ್ತರು ಅದ್ದೂರಿ ತಯಾರಿ ನಡೆಸಿದ್ದಾರೆ. ಮುಂಗಾರು ಮಳೆ ಜೋರಾಗಲಿ, ರೈತರಿಗೆ ಉತ್ತಮ ಬೆಳೆ ಫಸಲು ಬರಲಿ, ಸಮೃದ್ಧವಾಗಿ ರೈತರಿಗೆ, ಜನರಿಗೆ ನೆಮ್ಮದಿಯನ್ನು ಶ್ರೀ ದುರ್ಗಾ ಪರಮೇಶ್ವರಿ ಕರುಣಿಸಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದರು.

ಗ್ರಾಮಸ್ಥರ ಬಹು ದಿನದ ಬೇಡಿಕೆಯಂತೆ ಶ್ರೀ ದರ್ಗಾಪರಮೇಶ್ವರಿ ದೇವಸ್ಥಾನದ ಆವರಣದ ಸುತ್ತ 50 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನು ಗುಣಮಟ್ಟದಲ್ಲಿ ಮಾಡಿಸಲಾಗಿದೆ. ದೇವಾಲಯದ ಸುತ್ತ ರಥೋತ್ಸವ ಮೆರವಣಿಗೆ ಸಾಗಲು ಜಾಗದ ಸಮಸ್ಯೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ದೇವಾಲಯದ ಸುತ್ತಲು ಇರುವ ಏಳು ಮನೆಗಳನ್ನು ತರವು ಮಾಡಿಸಿ ಸೂಕ್ತ ಪರಿಹಾರದ ಜತಗೆ ಬದಲಿ ನಿವೇಶನ ಕೊಡಿಸಿ ಎಂದು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಶಾಸಕ.ಡಿ.ರವಿಶಂಕರ್ ಅವರನ್ನು ಇದೇ ವೇಳೆ ಗೌರವಿಸಿದರು.
ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯರಾದ ಕೋಳಿ ಪ್ರಕಾಶ್, ನಟರಾಜು, ಗ್ರಾಪಂ ಅಧ್ಯಕ್ಷೆ ವಿದ್ಯಾನಾರಾಯಣ್, ಉಪಾಧ್ಯಕ್ಷ ಎಂ.ಬಿ.ಲೋಕೇಶ್, ಸದಸ್ಯರಾದ ಹರಿರಾಜು, ಚೈತ್ರಾ ಲೋಕೇಶ್, ಎಚ್.ಡಿ.ನಾಗೇಶ್, ಎಚ್.ಇ.ಮಹದೇವಕುಮಾರ್, ಮಾಜಿ ಅಧ್ಯಕ್ಷ ಎಚ್.ಕೆ.ನಾಗರಾಜು(ಮೀನು), ಎಪಿಎಂಸಿ ಮಾಜಿ ನಿರ್ದೇಶಕರಾದ ಎಚ್.ಪಿ.ಪ್ರಶಾಂತ್, ಬಿ.ಎಂ.ನಾಗರಾಜು, ಹೆಬ್ಬಾಳು ನಾಗೇಂದ್ರ, ಕಾಂಗ್ರೆಸ್ ಮುಖಂಡರಾದ ಮಂಚನಹಳ್ಳಿ ರವಿ, ಅನಂತು, ಸುಬ್ಬುಕೃಷ್ಣ, ಧನಂಜಯ, ಮಂಜುನಾಥ್ , ಹಂಪಾಪುರ ದೇವರಾಜ್ ಇತರರಿದ್ದರು.

 

Share This Article

ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango

mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…

ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ..  Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.  ಚಿನ್ನದ ಅಂಗಡಿಗಳು ವ್ಯಾಪಾರದಿಂದ…

ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್​​ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice

  Sugarcane Juice: ಕಬ್ಬಿನ ಜ್ಯೂಸ್​​ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…