ವಿಜಯ್ ವರ್ಸಸ್ ವಿಜಯ್: ಎರಡನೇ ಬಾರಿಗೆ ತೆಲುಗು ಚಿತ್ರಕ್ಕೆ ಅವಕಾಶ ಪಡೆದ ‘ದುನಿಯಾ’ ನಟ

blank

ಬೆಂಗಳೂರು: ‘ಭೀಮ’ ಯಶಸ್ಸಿನ ಬಳಿಕ ನಟ ದುನಿಯಾ ವಿಜಯ್, ‘ಸಿಟಿಲೈಟ್’ಗೆ ಆ್ಯಕ್ಷನ್-ಕಟ್ ಹೇಳುತ್ತಿರುವುದು ಗೊತ್ತಿದೆ. ಈ ಚಿತ್ರದ ಮೂಲಕ ಪುತ್ರಿ ಮೋನಿಶಾರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ. ನಿರ್ದೇಶನ ಹಾಗೂ ನಟನೆ ಎರಡನ್ನೂ ಸಮದೂಗಿಸಿಕೊಂಡು ಹೋಗುತ್ತಿರುವ ಅವರು ಕನ್ನಡದ ಜತೆಗೆ ಪರಭಾಷೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. 2023ರಲ್ಲಿ ತೆಲುಗಿನ ‘ವೀರಸಿಂಹರೆಡ್ಡಿ’ ಮೂಲಕ ವಿಜಯ್ ಮೊದಲ ಬಾರಿ ಪರಭಾಷೆಗೆ ಹಾರಿದ್ದ ಅವರು, ಇತ್ತೀಚೆಗಷ್ಟೇ ನಯನತಾರಾ ಮುಖ್ಯಭೂಮಿಕೆಯಲ್ಲಿರುವ ‘ಮೂಕುತಿ ಅಮ್ಮನ್ 2’ ಮೂಲಕ ವಿಜಯ್ ತಮಿಳು ಚಿತ್ರರಂಗಕ್ಕೆ ಡೆಬ್ಯೂ ಮಾಡಿದ್ದರು. ಈ ಮಧ್ಯೆಯೇ ಅವರು ಮತ್ತೊಂದು ತೆಲುಗು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಹೌದು, ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ತಮಿಳು ನಟ ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ದುನಿಯಾ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಸೋಮವಾರ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಟಿ, ನಿರ್ಮಾಪಕಿ ಚಾರ್ಮಿ ಕೌರ್, ವಿಜಯ್‌ರನ್ನು ತಂಡಕ್ಕೆ ಸ್ವಾಗತಿಸಿದ್ದಾರೆ. ಇತ್ತೀಚೆಗೆಷ್ಟೇ ಬಹುಭಾಷಾ ತಾರೆ ತಬು ಚಿತ್ರತಂಡ ಸೇರಿಕೊಂಡಿದ್ದರು. ಈಗಾಗಲೇ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಬಿರುಸಿನಿಂದ ಸಾಗಿದ್ದು, ಜೂನ್‌ನಿಂದ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಪುರಿ ಜಗನ್ನಾಥ್ ಆ್ಯಕ್ಷನ್-ಕಟ್ ಹೇಳಿದ್ದ ‘ಲೈಗರ್’, ‘ಡಬಲ್ ಇಸ್ಮಾರ್ಟ್’ ಚಿತ್ರಗಳು ಪ್ಯಾನ್ ಇಂಡಿಯಾ ಮೂಡಿಬಂದಿದ್ದವು. ಇದೀಗ, ಈ ಹೊಸ ಚಿತ್ರ ಕೂಡ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆ ಮೂಲಕ ವಿಜಯ್ ಮೊದಲ ಬಾರಿಗೆ ಪ್ಯಾನ್ ಇಂಡಿಯಾದಲ್ಲಿ ಮಿಂಚಲು ಅಣಿಯಾಗುತ್ತಿದ್ದಾರೆ. ವಿಜಯ್ ಪಾತ್ರದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲವಾದರೂ, ಅವರು ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ವಿಜಯ್ ವರ್ಸಸ್ ವಿಜಯ್: ಎರಡನೇ ಬಾರಿಗೆ ತೆಲುಗು ಚಿತ್ರಕ್ಕೆ ಅವಕಾಶ ಪಡೆದ ‘ದುನಿಯಾ’ ನಟ

ಈ ವರ್ಷ ಹ್ಯಾಟ್ರಿಕ್ ಫಿಕ್ಸ್?: ದುನಿಯಾ ವಿಜಯ್ ಸ್ಯಾಂಡಲ್‌ವುಡ್‌ನಲ್ಲಿ ಕೂಡ ಬಿಜಿಯಿದ್ದಾರೆ. ‘ಸಿಟಿಲೈಟ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವುದರ ಜತೆಗೆ ಜಡೇಶ್ ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಆ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಇದರ ಜತೆಗೆ ಎಸ್. ನಾರಾಯಣ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಮಾರುತ’ ಚಿತ್ರದಲ್ಲೂ ವಿಜಯ್ ನಟಿಸಿದ್ದು, ತೆರೆಗೆ ಬರಲು ಸಿದ್ಧವಾಗಿದೆ. ಎಲ್ಲವೂ ಅಂದುಕೊಂಡಂತಾದರೆ ಈ ವರ್ಷ ವಿಜಯ್ ಅವರ ಮೂರು ಸಿನಿಮಾಗಳು ರಿಲೀಸ್ ಆಗುವ ನಿರೀಕ್ಷೆಯಿದೆ.

Share This Article

ನೀವು ತಪ್ಪದೇ ಈ ಆಹಾರಗಳನ್ನು ತಿನ್ನಲೇಬೇಕು… ಇವು ಕೆಟ್ಟ ಕೊಲೆಸ್ಟ್ರಾಲ್‌ನ ಶತ್ರುಗಳು! Cholesterol

Cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಅದರಲ್ಲೂ…

ದಾಲ್ಚಿನ್ನಿ ಸೇವನೆ ಪುರುಷರ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಯಾಕೆ ಗೊತ್ತಾ? | Cinnamon

Cinnamon: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ದಾಲ್ಚಿನ್ನಿ ಭಾರತೀಯರ ಮನೆಗಳಲ್ಲಿ ಹೆಚ್ಚಾಗಿ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ. ಇದು…

ಬೀದಿ ಬದಿ ಅಂಗಡಿಗಳಿಂದ ಜ್ಯೂಸ್​ ಖರೀದಿಸಿ ಕುಡಿಯುವಾಗ ಎಚ್ಚರ… ಈ ಜ್ಯೂಸ್ ಅತ್ಯಂತ ಅಪಾಯಕಾರಿ! Soft Drinks

Soft Drinks : ದೇಶಾದ್ಯಂತ ಬೇಸಿಗೆಯ ಬಿಸಿ ಸುಡುತ್ತಿದೆ. ಸೂರ್ಯ ಶಾಖದಿಂದ ಬಳಲಿ ಬೆಂಡಾದ ಜನರು…