ದೆಹಲಿಯ ಮಾನ್​ಸಿಂಗ್​ ರಸ್ತೆಯಲ್ಲಿ ಕಸ ವಿಲೇವಾರಿ ಟ್ರಕ್ ಡಿಕ್ಕಿ: ಮಗು ಸೇರಿ ಇಬ್ಬರ ದುರ್ಮರಣ, ಮತ್ತಿಬ್ಬರಿಗೆ ಗಾಯ

ನವದೆಹಲಿ: ದೆಹಲಿಯ ಇಂಡಿಯಾ ಗೇಟ್​ ಬಳಿ ಕಸವಿಲೇವಾರಿ ಟ್ರಕ್​ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟು ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಕಸ ತುಂಬಿಕೊಂಡ ಟ್ರಕ್​ ಮಂಗಳವಾರ ಬೆಳಗಿನ ಜಾವ ಮಾನ್​ಸಿಂಗ್ ರಸ್ತೆಯಲ್ಲಿ ಸಾಗುತ್ತಿತ್ತು. ಆಗ ಚಾಲಕ ಹಠಾತ್ತನೆ ನಿಯಂತ್ರಣ ಕಳೆದುಕೊಂಡ. ಮೊದಲು ಆಟೋರಿಕ್ಷಾಕ್ಕೆ ಟ್ರಕ್ ಡಿಕ್ಕಿ ಹೊಡೆದಿದೆ. ನಂತರ ಟ್ರಕ್​ ಪಾದಚಾರಿ ಮಾರ್ಗದಲ್ಲಿ ಚಲಿಸಿ ನಿಂತಿದ್ದ ಪಾದಚಾರಿಗಳಿಗೆ ಗುದ್ದಿದೆ.

ಈ ಘಟನೆಯಲ್ಲಿ 42 ವರ್ಷದ ವ್ಯಕ್ತಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ. ದೆಹಲಿ ಪೊಲೀಸರು ಕಸದ ಟ್ರಕ್​ ಚಾಲಕನನ್ನು ಬಂಧಿಸಿದ್ದಾರೆ.

 

Leave a Reply

Your email address will not be published. Required fields are marked *