ರೀಲ್ಸ್‌ಗೆ ಡಮ್ಮಿ ಗನ್ ಪೂರೈಕೆದಾರನಿಗೂ ಸಂಕಷ್ಟ

Gun

ಬೆಂಗಳೂರು: ರೀಲ್ಸ್ ಮಾಡಿ ಫೇಮಸ್ ಆಗುವ ತವಕದಲ್ಲಿ ಡಮ್ಮಿ ಗನ್ ಬಳಸಿದ್ದ ಅರುಣ್ ಕಟಾರೆ ಬಂಧನ ಪ್ರಕರಣದಲ್ಲಿ ಗನ್ ಪೂರೈಸಿದ್ದ ಕಂಪನಿ ಮಾಲೀಕನಿಗೆ ಕೊತ್ತನೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಮೈಸೂರು ನಗರದ ಸಾಹಿಲ್ ಗನ್ ಮಾಸ್ಟರ್ ಅಲೀಂ ಪಾಷಾ ಎಂಬಾತನಿಗೆ ಕೊತ್ತನೂರು ಪೊಲೀಸರು ನೋಟಿಸ್ ಜಾರಿ ಮಾಡಿ ಕೂಡಲೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ.

ಜೂನ್ 9ರಂದು ಅರುಣ್ ಕಟಾರೆ, ಡಮ್ಮಿ ಎಕೆ 47 ಗನ್ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಿ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ. ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಅರುಣ್ ವಿರುದ್ಧ ಆರ್ಮ್ಸ್ ಆಕ್ಟ್ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಿದ್ದರು. ವಿಚಾರಣೆ ವೇಳೆ ಸಿನಿಮಾ ಚಿತ್ರೀಕರಣಕ್ಕೆ ಡಮ್ಮಿ ಗನ್‌ಗಳನ್ನು ಪೂರೈಕೆ ಮಾಡುವ ಸಾಹಿಲ್ ಗನ್ ಮಾಸ್ಟರ್ ಅಲೀಂ ಪಾಷಾ ಬಳಿ ಬಾಡಿಗೆಗೆ ಪಡೆದಿರುವುದಾಗಿ ಅರುಣ್ ಹೇಳಿಕೆ ನೀಡಿದ್ದರು.

ಇದರ ಮೇರೆಗೆ ಅಲೀಂ ಪಾಷಾಗೆ ನೋಟಿಸ್ ಜಾರಿ ಮಾಡಿರುವ ಕೊತ್ತನೂರು ಪೊಲೀಸರು, ರೀಲ್ಸ್‌ನಲ್ಲಿ ಬಳಸಿದ್ದ ಎಕೆ 47 ಗನ್‌ಗಳ ನೈಜತೆ ಪರಿಶೀಲನೆ ನಡೆಸಲು ಹಾಜರುಪಡಿಸಿ, ಈ ಸಂಬಂಧ ಯಾವ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿದ್ದೀರ. ಜಿಎಸ್‌ಟಿ ಪಾವತಿದ ಸಟಿಫಿಕೇಟ್, ಗನ್ ಬಾಡಿಗೆ ಪಡೆದಿರುವುದಕ್ಕೆ ಬಾಡಿಗೆ ಹಣ ಪಾವತಿ ಬಗ್ಗೆ ಸಾಕ್ಷಾೃಧಾರ ಒದಗಿಸಬೇಕು. ಇದಲ್ಲದೆ, ಬಾಡಿಗೆಗೆ ಕೊಟ್ಟಿದ್ದ ಗನ್‌ಗಳು ಅಸಲಿಯೇ ಅಥವಾ ನಕಲಿಯೇ ಎಂಬುದಕ್ಕೆ ನಿಮ್ಮ ಬಳಿ ಇರುವ ಪೂರಕ ಸಾಕ್ಷಾೃಧಾರಗಳನ್ನು ವಿಚಾರಣೆಗೆ ಹಾಜರುಪಡಿಸುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

Share This Article

ನೈಲ್ ಪಾಲಿಶ್ ಬಳಸಿದ್ರೆ ಬರುತ್ತೆ ಕ್ಯಾನ್ಸರ್! ಯುವತಿಯರೇ ಎಚ್ಚರ

 ಬೆಂಗಳೂರು:  ಮಹಿಳೆಯರು ತಮ್ಮ ಕೈ ಮತ್ತು ಪಾದದ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಲು ಇಷ್ಟಪಡುತ್ತಾರೆ.  ವಿಶೇಷ…

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…