More

  ದುಗ್ಗಾವತಿಯಲ್ಲಿ ಟೊಮ್ಯಾಟೊ ಬೆಳೆ ಹಾನಿ: ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಶಾಸಕಿ ಲತಾ ಭೇಟಿ

  ಹರಪನಹಳ್ಳಿ: ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ವಿವಿಧೆಡೆ 50ಕ್ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿದ್ದು, ಅಲ್ಪ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

  ಹಲುವಾಗಲು 11, ಕಡತಿ 12, ದುಗ್ಗಾವತಿ 4 ಸೇರಿದಂತೆ ವಿವಿಧೆಡೆ 50ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೀಡಾಗಿವೆ. ಜಂಬುಲಿಂಗನಹಳ್ಳಿಯಲ್ಲಿ ದಾಸಪ್ಪ ಅವರ ಮನೆ ಗೋಡೆ ಕುಸಿದಿದ್ದು, ಗಾಯಗೊಂಡ ಭಾಗ್ಯಮ್ಮ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ದುಗ್ಗಾವತಿ ಬಳಿ 1.50 ಎಕರೆ ಟೊಮ್ಯಾಟೊ ಬೆಳೆ ಹಾನಿಯಾಗಿದೆ. ತಾವರಗುಂದಿ ಬಳಿ ಒಂದು ಎಕರೆ ಬೆಂಡೆಕಾಯಿ, ಯರಬಾಳು ಹಾಗೂ ಮತ್ತೂರು ಗ್ರಾಮಗಳ ಬಳಿ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ತಾಲೂಕಿನಾದ್ಯಂತ 198 ಶಾಲಾ ಕೊಠಡಿಗಳು ಸೋರುತ್ತಿವೆ.

  ಶಾಸಕಿ ಲತಾ ಭೇಟಿ: ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಬುಧವಾರ ದುಗ್ಗಾವತಿ, ವಟ್ಲಹಳ್ಳಿ, ಕಡತಿ, ನಂದ್ಯಾಲ, ನಿಟ್ಟೂರು, ನಿಟ್ಟೂರು ಬಸಾಪುರ, ತಾವರಗುಂದಿ, ಹಲುವಾಗಲು ಮುಂತಾದ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ, ಮನೆ ಹಾನಿ ಪರಿಶೀಲಿಸಿದರು. ದುಗ್ಗಾವತಿಯಲ್ಲಿ ಶಿಥಿಲಗೊಂಡ ಓವರ್‌ಹೆಡ್ ಟ್ಯಾಂಕ್ ತೆರವಿಗೊಳಿಸಲು ಪಿಡಿಒಗೆ ಸೂಚಿಸಿದರು. ಹಲುವಾಗಲು ಬಳಿ ಸಹ ಶಿಥಿಲ ಓವರ್‌ಹೆಡ್ ಟ್ಯಾಂಕ್ ಪರಿಶೀಲಿಸಿದರು.

  ಇದನ್ನೂ ಓದಿ: ಮಗಳ ಭವಿಷ್ಯಕ್ಕೆ ಟೊಮ್ಯಾಟೊ ತುಲಾಭಾರ ನೆರವೇರಿಸಿದ ದಂಪತಿ

  ವಟ್ಲಹಳ್ಳಿ, ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಶಿಥಿಲಗೊಂಡ ಕೊಠಡಿಗಳನ್ನು ವೀಕ್ಷಿಸಿ, ಪ್ರಕೃತಿ ವಿಕೋಪದಡಿ ದುರಸತಿ ಮಾಡಿಸಲು ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗದ ಎಇಇ ನಾಗಪ್ಪಗೆ ಸೂಚಿಸಿದರು. ನದಿ ತೀರದ ಗ್ರಾಮಗಳಲ್ಲಿ ಗ್ರಾಮಸ್ಥರು ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೊಳಿಸುವಂತೆ ಮನವಿ ಮಾಡಿದರು.

  ತಾಪಂ ಇಒ ಕೆ.ಆರ್.ಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಗೊಂದಿ, ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ, ವಲಯ ಅರಣ್ಯಾಧಿಕಾರಿ ಮಲ್ಲಪ್ಪ, ಪಿಡಬ್ಲುೃಡಿ ಎಇಇ ಸತೀಶ ಪಾಟೀಲ್, ತೋಟಗಾರಿಕೆ ಸಹಾಯಕ ನಿರ್ದೇಶಕ ಜಯಸಿಂಹ, ರವಿಕುಮಾರ, ಇಸಿಒ ಮಂಜುನಾಥ ಗಿರಜ್ಜಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts