More

    VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ ಮಿಸ್​ ಮಾಡಿಕೊಂಡ್ರೆ ನಿಮಗೆ ನಷ್ಟ!

    ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ ಸಾಕಷ್ಟು ವೈರಲ್​ ಆಗಿ ನೋಡುಗರ ಮನಸ್ಸನ್ನು ಸೆಳೆಯುತ್ತಿದೆ.

    ಹೌದು, ತನ್ನದೇ ಬೌಲ್​ನಿಂದ ಆಹಾರವನ್ನು ತೆಗೆದುಕೊಂಡು ಮೀನುಗಳಿಗೆ ತಿನಿಸುವ ಬಾತುಕೋಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.

    ವಿಡಿಯೋದಲ್ಲಿ ಏನಿದೆ?: ತನ್ನ ಕಂಟೈನರ್​ನಲ್ಲಿರುವ ಆಹಾರವನ್ನು ಬಾಯಿನಿಂದ ತೆಗೆದುಕೊಳ್ಳುವ ಬಾತುಕೋಳಿ ಕಂಟೈನರ್​ ಕೆಳಗಿನ ನೀರಿನಲ್ಲಿರುವ ಮೀನುಗಳ ಬಾಯಿಗೆ ಆಹಾರವನ್ನು ಹಾಕುತ್ತದೆ. ಇದನ್ನು ಹಾಗೇ ಅನೇಕ ಬಾರಿ ಪುನರಾವರ್ತಿಸುತ್ತದೆ.

    ಈ ವಿಡಿಯೋವನ್ನು ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದನ್ನು ಕಳೆದ ಶನಿವಾರ ಪ್ರಖ್ಯಾತ ಬ್ರೆಜಿಲಿಯನ್​ ಮೀನುಗಾರರ ಫೇಸ್​ಬುಕ್​ ಪೇಜ್ “ಡಯಾಸ್​ ಇ ನೊಯಿಟೆಸ್ ಡೆ ಪೆಸ್ಕಾ” ಫೇಸ್​ಬುಕ್​ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದೆ.

    ಈವರೆಗೂ 12 ಮಿಲಿಯನ್​ಗೂ ಹೆಚ್ಚು ವಿಕ್ಷಣೆ ಪಡೆದುಕೊಂಡಿದ್ದು, 2 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಸಾವಿರಾರು ಮಂದಿ ವಿಡಿಯೋ ಮೆಚ್ಚಿ ಅಭಿಪ್ರಾಯಗಳ ಸುರಿಮಳೆಗೈದಿದ್ದಾರೆ. (ಏಜೆನ್ಸೀಸ್​)

    Muito lindo a natureza

    Dias e Noites De Pesca ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಜನವರಿ 11, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts