26.8 C
Bangalore
Friday, December 13, 2019

ಜೋಡಿ ಕೊಲೆ ಆರೋಪಿ ಸೆರೆ

Latest News

ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಜಾತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ

ಚಿಕ್ಕನಾಯಕನಹಳ್ಳಿ: ಸುಕ್ಷೇತ್ರ ಕುಪ್ಪೂರು ಶ್ರೀಮರುಳಸಿದ್ದೇಶ್ವರ ಗದ್ದುಗೆ ಜಾತ್ರೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗುರುವಾರ ಚಾಲನೆ ನೀಡಿದ್ದು, ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಾತ್ರೆಗೆ ಬಂದಿದ್ದರು. ಶ್ರೀಮಠದ ಆವರಣದಲ್ಲಿ ಗುರುವಾರ...

ಬಲರಾಮ್ ಕುಣಿಗಲ್ ಬಿಜೆಪಿ ಅಧ್ಯಕ್ಷ

ಕುಣಿಗಲ್: ತಾಲೂಕು ಬಿಜೆಪಿ ನೂತನ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ಬಲರಾಮ್ ಗುರುವಾರ ಅವಿರೋಧ ಆಯ್ಕೆಯಾದರು. ಪಟ್ಟಣದ ದಿಶಾ ಪಾರ್ಟಿ ಹಾಲ್‌ನಲ್ಲಿ ರಾಜ್ಯ ಬಿಜೆಪಿ...

ಭಾರತದ ಪ್ರಗತಿಗೆ ಬೇಕು ವೈಜ್ಞಾನಿಕ ಶಿಕ್ಷಣ: ಡಾ.ಡಿ.ವಿ.ಗೋಪಿನಾಥ್

ದಾವಣಗೆರೆ: ಭಾರತದ ಪ್ರಗತಿಗೆ ವೈಜ್ಞಾನಿಕ ಶಿಕ್ಷಣ ಅತ್ಯವಶ್ಯ ಎಂದು ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರದ ಜೀವ ವೈದ್ಯಕೀಯ ವಿಭಾಗದ ನಿವೃತ್ತ ನಿರ್ದೇಶಕ ಡಾ.ಡಿ.ವಿ.ಗೋಪಿನಾಥ್ ಹೇಳಿದರು. ಪಾರ್ವತಮ್ಮ...

ಮಲ್ಲಾಪುರದಲ್ಲಿ ವಿಘ್ನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ: ಜಾತ್ರೆ ಕಣ್ತುಂಬಿಕೊಂಡ ಅಪಾರ ಭಕ್ತರು

ನೆಲಮಂಗಲ: ತಾಲೂಕಿನ ಮಲ್ಲಾಪುರದ ಪ್ರಸಿದ್ಧ ಶ್ರೀ ಬಯಲು ಉದ್ಭವ ವಿಘ್ನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಕಡಲೆಕಾಯಿ ಪರಿಷೆ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಪರಿಷೆ...

ಹೆದ್ದಾರಿ 4ರ ಜಾಸ್ ಟೋಲ್ ಬಳಿ ಲಾರಿ-ಬಸ್ ಡಿಕ್ಕಿಯಾಗಿ 16 ಮಂದಿಗೆ ಗಾಯ

ನೆಲಮಂಗಲ: ತುಮಕೂರು-ಬೆಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 4ರ ಜಾಸ್ ಟೋಲ್ ಬಳಿ ಗುರುವಾರ ರಾಜ್ಯ ಸಾರಿಗೆ ಬಸ್ ಮತ್ತು ಲಾರಿ ನಡುವೆ ಸಂಭವಿಸಿರುವ ಅಪಘಾತದಲ್ಲಿ ಚಾಲಕ...

ಈಶ್ವರಮಂಗಲ: ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಅಜಲಾಡಿ ಸಮೀಪದ ಹೊಸಮಾರು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ತಂಡ ಘಟನೆ ಬಹಿರಂಗಗೊಂಡ 12 ಗಂಟೆಯೊಳಗೆ ಬಂಧಿಸುವ ಮೂಲಕ ಕೊಲೆ ರಹಸ್ಯಕ್ಕೆ ತೆರೆ ಎಳೆದಿದ್ದಾರೆ.

ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ, ಗಾರೆ ಕಾರ್ಮಿಕ ಕರೀಂಖಾನ್(29) ಬಂಧಿತ ಆರೋಪಿ. ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ಬೆಳಗ್ಗೆ ಬಂದು ಕೈಯಲ್ಲಾದ ಗಾಯಕ್ಕೆ ಚಿಕಿತ್ಸೆಗೆಂದು ದಾಖಲಾಗಿದ್ದ ಆರೋಪಿಯನ್ನು ಪೊಲೀಸರು ಸಾಯಂಕಾಲ ಬಂಧಿಸಿದ್ದಾರೆ. ಕಳ್ಳತನದ ಉದ್ದೇಶದಿಂದ ರಾತ್ರಿ ವೇಳೆ ಮನೆಗೆ ನುಗ್ಗಿದ್ದ ಈತ ಮನೆಯವರು ಎಚ್ಚರಗೊಂಡ ಕಾರಣ ಕೊಲೆ ಕೃತ್ಯಕ್ಕೆ ಮುಂದಾಗಿರುವುದಾಗಿ ಪೋಲಿಸರ ಮುಂದೆ ಒಪ್ಪಿಕೊಂಡಿದ್ದಾನೆ.

ಕುರಿಯ ಗ್ರಾಮದ ಅಜಲಾಡಿ ಸಮೀಪದ ಹೊಸಮಾರು ನಿವಾಸಿ ಶೇಖ್ ಕೊಗ್ಗು ಸಾಹೇಬ್ (70), ಅವರ ಪ್ರಥಮ ಪುತ್ರಿ ಶಕೀಲಾ ಬಾನು ಅವರ ಪುತ್ರಿ, ಪುತ್ತೂರಿನ ಮಂಜಲ್ಪಡ್ಪು ಎಂಪಿಎಂ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶಮಿಯಾಬಾನು(16) ಕೊಲೆಯಾದವರು. ತಲೆ ಮತ್ತು ಕೈಯ ಭಾಗಕ್ಕೆ ಏಟು ತಗುಲಿ ಮಾತನಾಡದ ಸ್ಥಿತಿಯಲ್ಲಿರುವ ಶೇಖ್ ಕೊಗ್ಗು ಸಾಹೇಬ್ ಅವರ ಪತ್ನಿ ಖತೀಜಾಬಿ(65) ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ರಾತ್ರಿ ವೇಳೆ ನಡೆದಿದ್ದ ಈ ಘಟನೆ ಮಂಗಳವಾರ ಬೆಳಗ್ಗೆ ಬಹಿರಂಗಗೊಂಡಿತ್ತು. ಮಹಜರು ಪ್ರಕರಣ ನಡೆದ ಬೆನ್ನಲ್ಲೇ ಪುತ್ತೂರು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ಅವರು ತನಿಖಾಧಿಕಾರಿಯಾಗಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು.
ಮನೆಯೊಳಗೆ ನಡೆದ ಘರ್ಷಣೆಯಲ್ಲಿ ಆರೋಪಿ ಕರೀಂಖಾನ್ ಕೈಗೆ ಗಾಯವಾಗಿದ್ದು, ಚಿಕಿತ್ಸೆ ಹಿನ್ನೆಲೆಯಲ್ಲಿ ಆತನನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಕಳವುಗೈಯಲು ನುಗ್ಗಿ ಕೊಲೆಗೈದ: ಆರೋಪಿಯನ್ನು ಪೊಲೀಸರು ಮಂಗಳವಾರ ಸಾಯಂಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ವೇಳೆ ಆರೋಪಿ ಕೊಲೆ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಭಾನುವಾರ ರಾತ್ರಿ 11ಕ್ಕೆ ಆರೋಪಿ ಕರೀಂಖಾನ್ ಶೇಖ್ ಕೊಗ್ಗು ಸಾಹೇಬ್ ಅವರ ಮನೆಯಿಂದ ಕಳ್ಳತನ ನಡೆಸುವ ಉದ್ದೇಶದಿಂದ ಮನೆಯ ವಿದ್ಯುತ್ ಫ್ಯೂಸ್ ತೆಗೆದು ಗೋಡೆ ಏರಿ ಹೆಂಚು ಸರಿಸಿ ಒಳನುಗ್ಗಿದ್ದನು. ಶೇಖ್ ಕೊಗ್ಗು ಸಾಹೇಬ್ ಅವರ ಇತ್ತೀಚೆಗಷ್ಟೇ ವಿವಾಹವಾಗಿದ್ದ, ವಿದೇಶದಲ್ಲಿರುವ ಪುತ್ರನ ಪತ್ನಿ ಮಲಗುತ್ತಿದ್ದ ಕೋಣೆಗೆ ನೇರವಾಗಿ ಇಳಿದಿದ್ದನು. ಮದುಮಗಳ ಅಪಾರ ಚಿನ್ನಾಭರಣ ಅಲ್ಲಿ ಇರಬಹುದು ಎಂಬ ಶಂಕೆಯಿಂದ ಹುಡುಕಾಡಿದ್ದನು. ಆ ವೇಳೆ ಎಚ್ಚರಗೊಂಡಿದ್ದ ಶೇಖ್ ಕೊಗ್ಗು ಸಾಹೇಬ್ ಮತ್ತು ಶಮಿಯಾಬಾನು ವಿದ್ಯುತ್ ದೀಪ ಬೆಳಗಲು ಪ್ರಯತ್ನಿಸಿ, ಬಳಿಕ ಮೊಬೈಲ್ ಲೈಟ್ ಹಾಕಿದ್ದಾರೆ. ಮನೆಮಂದಿಗೆ ತನ್ನ ಪರಿಚಯವಿರುವುದರಿಂದ ಸಿಕ್ಕಿಬೀಳುವ ಭಯದಿಂದ ಹಾಗೂ ಈ ಹಿಂದೆ ಶೇಖ್ ಕೊಗ್ಗು ಸಾಹೇಬ್ ಅವರೊಂದಿಗೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ದ್ವೇಷ ಇದ್ದುದರಿಂದ ಅವರನ್ನು ಕೊಲೆಗೈಯಲು ನಿರ್ಧರಿಸಿದ್ದನು. ಅಡುಗೆ ಕೋಣೆಯೊಳಗಿದ್ದ ಕೊಕ್ಕೆ ಕತ್ತಿಯಿಂದ ಶೇಖ್ ಕೊಗ್ಗು ಸಾಹೇಬ್ ಮತ್ತು ಶಾಮಿಯಾಬಾನು ಅವರನ್ನು ಹತ್ಯೆ ಮಾಡಿದ್ದು, ಖತೀಜಾಬಿ ಅವರಿಗೆ ಹಲ್ಲೆ ಮಾಡಿ, ಮನೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರ ಮತ್ತು 6 ಸಾವಿರ ರೂ. ಹಣವನ್ನು ಕಳವು ಮಾಡಿರುವುದಾಗಿ ಆತ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಗಾಯಕ್ಕೆ ಕತೆಕಟ್ಟಿ ಸಿಕ್ಕಿಬಿದ್ದ!: ಮನೆಯೊಳಗೆ ನಡೆದ ಘರ್ಷಣೆಯಲ್ಲಿ ಆರೋಪಿ ಕೈಗೆ ಗಾಯವಾಗಿತ್ತು. ಆದರೂ ಅಂದೇ ರಾತ್ರಿ ಕುರಿಯ ಗ್ರಾಮದ ಕಲ್ಲಗುಡ್ಡೆ ಮದ್ರಸದಲ್ಲಿ ನಡೆಯುತ್ತಿದ್ದ ಮಿಲಾದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ಗಾಯದ ಕುರಿತು ಅಲ್ಲಿ ಕೆಲವರು ಪ್ರಶ್ನಿಸಿದ್ದ ವೇಳೆ ತಾನು ಬೈಕಿನಲ್ಲಿ ಬರುತ್ತಿರುವ ವೇಳೆ ಯಾರೋ ಅಪರಿಚಿತರು ತಲುವಾರು ಬೀಸಿದ್ದು, ತಾನು ತಪ್ಪಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದ. ಇನ್ನು ಕೆಲವರಲ್ಲಿ ಆತ, ತನಗೆ ಯಾರೋ ಅಪರಿಚಿತರು ಹಲ್ಲೆ ನಡೆಸಿ ಪರ್ಪುಂಜ ತನಕ ಅಪರಿಸಿಕೊಂಡು ಹೋಗಿ ಅಲ್ಲಿ ಬಿಟ್ಟಿರುವುದಾಗಿ ಹೇಳಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಕೆಲವರು ಸೂಚಿಸಿದಾಗ ಆತ ಪೊಲೀಸರಿಗೆ ದೂರು ನೀಡುವುದು ಬೇಡ ಎಂದು ಜಾರಿಕೊಂಡಿದ್ದ. ಇದು ಕೆಲವರ ಸಂಶಯಕ್ಕೆ ಕಾರಣವಾಗಿತ್ತು.
ಸೋಮವಾರ ಬೆಳಗ್ಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಗಾಯದ ತಪಾಸಣೆ ಮಾಡಿಸಿಕೊಂಡಿದ್ದ. ವೈದ್ಯರು ಕೈಮೂಳೆ ಮುರಿದಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದ್ದರು. ನಾಳೆ ಬರುವುದಾಗಿ ತಿಳಿಸಿ ಆಸ್ಪತ್ರೆಯಿಂದ ಹೊರಟು ಹೋಗಿದ್ದ ಆರೋಪಿ ಮಂಗಳವಾರ ಬೆಳಗ್ಗೆ ಮತ್ತೆ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದ.
ಕೊಲೆ ಘಟನೆ ಮಂಗಳವಾರ ಬೆಳಗ್ಗೆ ಬಹಿರಂಗಗೊಂಡ ಬಳಿಕ ಅಲ್ಲಿ ಸೇರಿದ್ದ ಮಂದಿ ಈ ವಿಚಾರ ಪ್ರಸ್ತಾಪಿಸತೊಡಗಿದ್ದರು. ಕೈಗೆ ಗಾಯವಾಗಿರುವ ಕರೀಂಖಾನ್ ಬಗ್ಗೆಯೇ ಸಂಶಯ ವ್ಯಕ್ತಪಡಿಸತೊಡಗಿದ್ದರು. ಅಲ್ಲದೆ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದರು. ಕುರಿಯ ಗ್ರಾಮದ ಬೀಟ್ ಸಿಬ್ಬಂದಿ ಭೀಮ್‌ಸೇನ್ ಅವರು ನೀಡಿದ ಸುಳಿವಿನ ಅಧಾರದಲ್ಲಿ ಪೊಲೀಸರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದರು.

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....