ಇನ್ನು ಮುಂದೆ ಡಬ್ಬಿಂಗ್​ ಹೋರಾಟಕ್ಕೂ, ನನಗೂ ಸಂಬಂಧವಿಲ್ಲ: ನಟ ಜಗ್ಗೇಶ್​ ಟ್ವೀಟ್​

ಬೆಂಗಳೂರು: ಇನ್ನು ಮುಂದೆ ಡಬ್ಬಿಂಗ್​ ಹೋರಾಟಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕನ್ನಡಿಗರಿಗೆ ಏನು ಇಷ್ಟವೋ ಅದನ್ನು ನೋಡಲು ಅವರು ಸರ್ವಸ್ವತಂತ್ರರು ಎಂದು ನಟ ಜಗ್ಗೇಶ್​ ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿದ ನಟ ಜಗ್ಗೇಶ್​, ನನ್ನ ಹಿಂದಿನ ನಡವಳಿಕೆಗಳಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಇರಲಿ. ಇನ್ನುಮುಂದೆ ನಾನಾಯಿತು, ನನ್ನ ಕಲಾ ಕಾರ್ಯವಾಯಿತು ಎಂದುಕೊಂಡು ಇರುತ್ತೇನೆ ಎಂದಿದ್ದಾರೆ.

ನಾನು ಡಬ್ಬಿಂಗ್​ ವಿರೋಧಿಸಿದ್ದು ಕಲಾವಿದರು, ತಂತ್ರಜ್ಞರ ಒಳಿತಿಗಾಗಿತ್ತೇ ಹೊರತು ವೈಯಕ್ತಿಕ ಹಿತಾಸಕ್ತಿಗಾಗಿ ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.