More

    ಫಿಲ್ಮ್ ಸಿಟಿಗೆ ದುಬೈ ಮಾದರಿ?

    ಬೆಂಗಳೂರು: ಹೆಸರಘಟ್ಟದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಫಿಲ್ಮ್​ಸಿಟಿ ಮಾಡಬೇಕೆಂಬ ಕಲ್ಪನೆ ಬಿ.ಎಸ್. ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮೊಳಕೆಯೊಡೆದ ಯೋಜನೆ. ಆದರೆ, ರಾಜಕೀಯ ಬೆಳವಣಿಗೆ, ಬದಲಾದ ನಾಯಕತ್ವದ ಕಾರಣಕ್ಕೆ ಈ ಫಿಲ್ಮ್​ಸಿಟಿ ಮೈಸೂರು, ರಾಮನಗರದೊಂದಿಗೆ ತಳುಕುಹಾಕಿಕೊಂಡಿತು. ಅಂತಿಮವಾಗಿ ಇದೀಗ ಹೆಸರಘಟ್ಟದಲ್ಲೇ ಫಿಲ್ಮ್​ಸಿಟಿ ಆರಂಭಿಸಲು ಮುಖ್ಯಮಂತ್ರಿ ಬಿಎಸ್​ವೈ ಆಸಕ್ತಿ ತೋರಿದ್ದು, ರೂಪುರೇಷೆ ಸಿದ್ಧವಾಗುತ್ತಿದೆ. ಬಹುತೇಕ ದುಬೈ ಫಿಲ್ಮ್ ಸಿಟಿ ಮಾದರಿಯಲ್ಲೇ ಇಲ್ಲಿಯೂ ಚಿತ್ರನಗರಿ ನಿರ್ವಿುಸುವ ಸಾಧ್ಯತೆ ಇದೆ. ಫಿಲ್ಮ್ ಸಿಟಿ ಸ್ವರೂಪ, ಯೋಜನೆ ಉದ್ದೇಶ, ಅಧ್ಯಯನ, ಸಂಭಾವ್ಯ ಅವಕಾಶಗಳು, ಸ್ಥಳದ ಮೌಲ್ಯಮಾಪನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಅವಲೋಕನ ನಡೆದಿದೆ. ಹಾಗೆಯೇ ಫಿಲ್ಮ್ ಸ್ಟುಡಿಯೋ ಜತೆ ಮನರಂಜನಾ ಸಂಕೀರ್ಣ ನಿರ್ಮಾಣ ಆಗಬೇಕೆಂಬ ಬಗ್ಗೆ ಸ್ಪಷ್ಟತೆಗೂ ಬರಲಾಗಿದೆ.

    ಸಿನಿಮಾ ನಿರ್ವಣ, ಸಿನಿಮಾ ಪ್ರದರ್ಶನ, ಚಿತ್ರರಂಗಕ್ಕೆ ಸೇರಿದವರ ಕೌಶಲ ಪ್ರದರ್ಶನಕ್ಕೆ ಅವಕಾಶ ಕೊಡುವುದು ಸೇರಿ ಸ್ಟುಡಿಯೋಗಳು, ಪ್ರದರ್ಶನಕ್ಕೆ ಜಾಗದ ಸೌಕರ್ಯ, ರಿಕ್ರಿಯೇಷನಲ್ ವಲಯ ಒಳಗೊಳ್ಳಲಿದೆ. ರಾಜ್ಯದ ಸಿನಿಮಾಗಳ ನಿರ್ವಣ, ಪ್ರಮೋಷನ್​ಗೆ

    ಅನುಕೂಲ ಮಾಡಿಕೊಡುವುದು, ವಿಶೇಷ ಕೌಶಲಹೊಂದಿದವರಿಗೆ ವೇದಿಕೆ ಕಲ್ಪಿಸಲು ಮತ್ತು ಚಿತ್ರರಂಗಕ್ಕೆ ಪೂರಕವಾದ ಸಾಂಸ್ಕೃತಿಕ ಕೇಂದ್ರ ಮಾಡಿ ಪ್ರವಾಸಿ ತಾಣವನ್ನಾಗಿಯೂ ರೂಪಿಸುವ ಉದ್ದೇಶವಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ದುಬೈ ಚಿತ್ರನಗರಿ ಮಾದರಿ ಸೂಕ್ತವೆನಿಸಿದೆ. ಕೆಲವೆಡೆ ಆದಾಯದ ದೃಷ್ಟಿಯಿಂದ ಮದುವೆ, ಕಾಪೋರೇಟ್ ಸಭೆ ಸಮಾರಂಭಗಳಿಗೂ ಅವಕಾಶ ನೀಡಲಾಗುತ್ತದೆ. ಇಲ್ಲೂ ಅದನ್ನು ವ್ಯಾಪ್ತಿಗೆ ತರಬಹುದೇ ಎಂಬ ಚಿಂತನೆ ಇದೆ.

    ಯೋಜನೆಗೆ 20 ಎಕರೆ

    ಹೆಸರಘಟ್ಟದಲ್ಲಿರುವ ಸರ್ಕಾರಿ ಫಿಲ್ಮ್ ಆಂಡ್ ಟೆಲಿವಿಜನ್ ಸಂಸ್ಥೆಯ 25 ಎಕರೆ ಜಾಗದಲ್ಲಿ 20 ಎಕರೆ ಈ ಯೋಜನೆಗೆ ಲಭ್ಯವಾಗಬಹುದಾಗಿದ್ದು, ಉಳಿದಂತೆ 100ರಿಂದ 200 ಎಕರೆ ಪ್ರದೇಶದಲ್ಲಿ ನಿರ್ವಿುಸಲು ಉದ್ದೇಶಿಸಲಾಗಿದೆ.

    ಜಾಗತಿಕ ಚಿತ್ತ

    ಫಿಲ್ಮ್ ಸಿಟಿ ಎಂದಾಕ್ಷಣ ಸರ್ಕಾರ ಕೇವಲ ಕಲ್ಪನೆಗೆ ಸೀಮಿತಗೊಳ್ಳದೇ ವಿಶ್ವದ ಹಾಗೂ ದೇಶದ ವಿವಿಧ ಕಡೆ ಇರುವ ಹೆಸರಾಂತ ಫಿಲ್ಮ್ ಸಿಟಿಗಳ ವಿಶೇಷತೆಯ ಬಗ್ಗೆ ಮಾಹಿತಿ ಕಲೆ ಹಾಕಿದೆ. ಪ್ರತಿ ಫಿಲ್ಮ್ ಸಿಟಿಯ ಅಳತೆಯಿಂದ ಹಿಡಿದು, ಸಿಗುವ ಸಾಧನ, ಉಪಕರಣ ಹಾಗೂ ಸೌಲಭ್ಯಗಳನ್ನು ಪಟ್ಟಿಮಾಡಿಕೊಳ್ಳಲಾಗಿದೆ. ದುಬೈ ಸ್ಟುಡಿಯೋ ಸಿಟಿ, ಇಂಗ್ಲೆಂಡ್​ನ ವಾರ್ನರ್ ಬ್ರೊಸ್ ಸ್ಟುಡಿಯೋಸ್, ಅಮೆರಿಕದ ಪ್ಯಾರಾಮೌಂಟ್ ಪಿಕ್ಚರ್ ಸ್ಟುಡಿಯೋ, ರಾಮೋಜಿ ಫಿಲ್ಮ್ ಸಿಟಿ, ಮುಂಬೈ ಫಿಲ್ಮ್ ಸಿಟಿ, ನೋಯ್ಡಾ ಫಿಲ್ಮ್ ಸಿಟಿ, ಇನ್ನೋವೆಟಿವ್ ಫಿಲ್ಮ್ ಸಿಟಿಗಳ ಬಗ್ಗೆ ಈ ವರೆಗೆ ಅಧ್ಯಯನ ಮಾಡಲಾಗಿದೆ. ನಿರ್ಮಾಣ ಸೌಲಭ್ಯ ಎಲ್ಲಿ ಹೇಗಿದೆ? ನಿರ್ಮಾಣ ನಂತರದ ಸೌಲಭ್ಯಗಳು ಎಷ್ಟು ಆಧುನಿಕವಾಗಿವೆ? ಮನರಂಜನಾ ಕೇಂದ್ರ, ವಸತಿ ವ್ಯವಸ್ಥೆ, ವಾಣಿಜ್ಯ ವಲಯ, ಶೈಕ್ಷಣಿಕ ಮತ್ತು ತರಬೇತಿ ವಲಯಗಳ ಬಗ್ಗೆ ಈ ಫಿಲ್ಮ್ ಸಿಟಿಗಳ ನಡುವಿನ ವ್ಯತ್ಯಾಸ ಗುರುತಿಸಲಾಗಿದೆ. ಈ ಮೂಲಕ ಅಗತ್ಯ ವಿಚಾರದೊಂದಿಗೆ ಫಿಲ್ಮ್ ಸಿಟಿ ರೂಪಿಸಲು ಪ್ರಾಥಮಿಕ ಹಂತದ ರೂಪುರೇಷೆ ಸಿದ್ಧಪಡಿಸಿಕೊಳ್ಳಲಾಗಿದೆ.

    ಶ್ರೀಕಾಂತ್ ಶೇಷಾದ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts