ದೆಹಲಿಯಲ್ಲಿ ಮೆಟ್ರೋ ರೈಲು ಮತ್ತು ನಗರ ಸಾರಿಗೆ ಬಸ್​ನಲ್ಲಿ ಮಹಿಳೆಯರಿಗೆ ಇನ್ನು ಉಚಿತ ಪ್ರಯಾಣ

ನವದೆಹಲಿ: ದೆಹಲಿಯ ಮೆಟ್ರೋ ರೈಲು ಮತ್ತು ನಗರ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವುದಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಘೋಷಿಸಿದ್ದಾರೆ.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು 2 ರಿಂದ 3 ತಿಂಗಳಲ್ಲಿ ಈ ಸೌಲಭ್ಯ ಜಾರಿಗೆ ಬರಲಿದೆ ಎಂದರು.

ಈ ಕುರಿತ ವಿಸ್ತೃತವಾದ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಮತ್ತು ಡಿಎಂಆರ್​ಸಿಎಲ್​ಗೆ (ದೆಹಲಿ ಮೆಟ್ರೋ ರೈಲು ನಿಗಮ) ಸೂಚಿಸಲಾಗಿದೆ. ಇದಕ್ಕಾಗಿ ಒಂದು ವಾರದ ಗಡುವು ನಿಗದಿಪಡಿಸಲಾಗಿದೆ. ಅಲ್ಲದೆ, ಇದರ ಕುರಿತು ಸಾರ್ವಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸಲು ಕ್ರಮ ಕೈಗೊಳ್ಳಾಗುತ್ತಿದೆ ಎಂದು ಹೇಳಿದರು.

ಸ್ಥಿತಿವಂತರು ಬೇಕಾದರೆ ಟಿಕೆಟ್​ ಖರೀದಿಸಲಿ
ಮೆಟ್ರೋ ಮತ್ತು ನಗರ ಸಾರಿಗೆ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗುತ್ತಿದೆ. ಟಿಕೆಟ್​ ಖರೀದಿಸಲು ಕಷ್ಟ ಎನ್ನುವವರು ಸಾಕಷ್ಟು ಜನರಿದ್ದಾರೆ. ಅಂಥವರನ್ನು ದೃಷ್ಟಿಯಲ್ಲಿಟ್ಟುಕೊಂಡು ಉಚಿತ ಪ್ರಯಾಣದ ಸೌಲಭ್ಯ ಜಾರಿಗೊಳಿಸಲಾಗುತ್ತಿದೆ. ಸ್ಥಿತಿವಂತರು ಬೇಕಾದರೆ ಟಿಕೆಟ್​ ಖರೀದಿಸಿ ಪ್ರಯಾಣಿಸಲು ಯಾವುದೇ ಅಡ್ಡಿಯಿರುವುದಿಲ್ಲ ಎಂದು ಕೇಜ್ರಿವಾಲ್​ ಸ್ಪಷ್ಟಪಡಿಸಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *