ವರ್ಗಾವಣೆ ಆದೇಶದ ವಿರುದ್ಧ ಸುಪ್ರೀಂ​ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ ಸಿಬಿಐ ಅಧಿಕಾರಿಗಳು

ನವದೆಹಲಿ: ತಮ್ಮನ್ನು ವರ್ಗಾವಣೆ ಮಾಡಿರುವ ಸಿಬಿಐ ನಿರ್ದೇಶಕ ನಾಗೇಶ್ವರ್​ ರಾವ್​ ಆದೇಶದ ವಿರುದ್ಧ ಸಿಬಿಐ ಅಧಿಕಾರಿಗಳಾದ ಡಿಎಸ್​ಪಿ ಅಶ್ವಿನಿ ಗುಪ್ತಾ, ಡಿಎಸ್​ಪಿ ಎ.ಕೆ.ಬಸ್ಸಿ ಅವರು ಸುಪ್ರೀಂಕೋರ್ಟ್​ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸಿಬಿಐ ಮಾಜಿ ನಿರ್ದೇಶಕ ಅಲೋಕ್​ ವರ್ಮಾ ಜ.10ರಂದು ಹುದ್ದೆಯಿಂದ ವಜಾಗೊಂಡ ಬಳಿಕ ಜ.11ರಂದು ಅಶ್ವನಿ ಗುಪ್ತಾ ಹಾಗೂ ಎ.ಕೆ.ಬಸ್ಸಿ ಅವರನ್ನು ವರ್ಗಾವಣೆ ಮಾಡಿ ನಾಗೇಶ್ವರ್​ ರಾವ್​ ಆದೇಶಿಸಿದ್ದರು. ಇವರಿಬ್ಬರೂ ಅಲೋಕ್​ ವರ್ಮಾ ನೇತೃತ್ವದ ತನಿಖಾ ತಂಡದ ಅಧಿಕಾರಿಗಳು ಎನ್ನಲಾಗಿದೆ.

ಸುಪ್ರೀಂಕೋರ್ಟ್​ನಿಂದ ಕ್ಲೀನ್​ಚಿಟ್​ ಪಡೆದು ಹುದ್ದೆಗೆ ಮರಳಿದ್ದ ಅಲೋಕ್​ ವರ್ಮಾ ತಮ್ಮ ತಂಡದ ಅಧಿಕಾರಿಗಳನ್ನೆಲ್ಲ ಮರಳಿ ಕರೆಸಿ, ರಾಕೇಶ್​ ಆಸ್ಥಾನಾ ಅವರ ಪ್ರಕರಣವನ್ನು ಅನುಸರಿಸದಿರಲು ಹೇಳಿದ್ದರು.

ನಂತರ ಗುರುವಾರ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಅದಾದ ಬಳಿಕ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಅವರು ಮಾಡಿದ್ದ ವರ್ಗಾವಣೆಯನ್ನು ಜ.9ರಂದು ನಾಗೇಶ್ವರ್​ ರಾವ್​ ರದ್ದುಗೊಳಿಸಿ, ಅಶ್ವಿನಿ ಗುಪ್ತಾ ಹಾಗೂ ಎ.ಕೆ.ಬಸ್ಸಿ ಅವರನ್ನು ವರ್ಗಾವಣೆ ಮಾಡಿದ್ದರು.

Leave a Reply

Your email address will not be published. Required fields are marked *