More

    ನುಗ್ಗೆಯ ಸವಿದು ಹಿಗ್ಗಿರಿ: ನುಗ್ಗೆಕಾಯಿ ರಸಂ ಮಾಡೋದು ತುಂಬ ಸುಲಭ…

    ಆರೋಗ್ಯದ ದೃಷ್ಟಿಯಿಂದ ನುಗ್ಗೆಯು ಬಹಳ ಒಳ್ಳೆಯದು.ಇದರಲ್ಲಿ ಕಬ್ಬಿಣಾಂಶ ಮತ್ತು ಕ್ಯಾಲ್ಷಿಯಂ ಅಧಿಕ ವಿರುವುದರಿಂದ ಮೂಳೆಗೆ ಹಾಗೂ ಅನೀಮಿಯ ಇರುವವರಿಗೆ ಇದು ಒಳ್ಳೆಯದು. ಇದು ಬ್ಲಡ್ ಶುಗರ್ ಹಾಗೂ ಕೊಲೆಸ್ಟ್ರಾಲನ್ನು ನಿಯಂತ್ರಣದಲ್ಲಿರಿಸುತ್ತದೆ. ಇಮ್ಯುನಿಟಿ ಜಾಸ್ತಿ ಮಾಡಲು ಇದು ಸಹಾಯಕ. ನುಗ್ಗೆಕಾಯಿ, ಹೂವು ಹಾಗೂ ಸೊಪ್ಪುಗಳನ್ನು ಬಳಸಿ ರುಚಿಯಾದ ಅಡುಗೆ ಮಾಡಬಹುದು.

    ಬೇಕಾಗುವ ಸಾಮಗ್ರಿಗಳು: ನುಗ್ಗೆ ಕಾಯಿ ಎರಡು ಕಪ್, ತೊಗರಿ ಬೇಳೆ ಅರ್ಧ ಕಪ್, ನೀರುಳ್ಳಿ ಒಂದು,  ಟೊಮ್ಯಾಟೋ ಒಂದು,  ಕೊತ್ತಂಬರಿ ಸೊಪ್ಪು ಸ್ವಲ್ಪ, ಬೆಳ್ಳುಳ್ಳಿ ಆರು ಎಸಳು, ಕೆಂಪುಮೆಣಸಿನಕಾಯಿ ಎರಡು, ಕರಿಬೇವು ಸ್ವಲ್ಪ, ಜೀರಿಗೆ 2 ಚಮಚ, ಹುಣಸೆ ಹುಳಿ ಸ್ವಲ್ಪ, ಸಾಂಬಾರ್ ಪುಡಿ 2 ಚಮಚ, ಇಂಗು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ: ತೊಗರಿ ಬೇಳೆಯನ್ನು ತೊಳೆದು ಅದಕ್ಕೆ ಹೆಚ್ಚಿದ ನೀರುಳ್ಳಿ, ಹೆಚ್ಚಿದ ಟೊಮ್ಯಾಟೋ, ಮೂರು ಬೆಳ್ಳುಳ್ಳಿ ಎಸಳು ಹಾಗೂ ಒಂದು ಚಮಚೆ ಜೀರಿಗೆ ಮತ್ತು ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿರಿ. ತೊಗರಿ ಬೇಳೆ ಬೆಂದ ನಂತರ ಅದಕ್ಕೆ ಸಾಂಬಾರ್ ಪುಡಿ ಹಾಗೂ ನುಗ್ಗೆಕಾಯಿ ಹಾಕಿ ಬೇಯಿಸಿರಿ. ಒಗ್ಗರಣೆಗೆ ಸಾಸಿವೆ, ಕರಿಬೇವು , ಇಂಗು, ಜೀರಿಗೆ, ಬೆಳ್ಳುಳ್ಳಿ, ಕೆಂಪು ಮೆಣಸು ಹಾಕಿರಿ.

    | ಹರ್ಷಾ ಕಾಮತ್, ಕಾರ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts