ಡ್ರಗ್ಸ್​ ಕೇಸ್​; ಸಿಸಿಬಿ ವಿಚಾರಣೆಗೆ ಬಂದ ದಿಗಂತ್​

ಬೆಂಗಳೂರು: ಡ್ರಗ್ಸ್​ ಕೇಸ್​ ಸಂಬಂಧ ಮತ್ತೊಮ್ಮೆ ವಿಚಾರಣೆ ಎದುರಿಸಲು ನಟ ದಿಗಂತ್​ ಮಂಚಾಲೆ ಬುಧವಾರ ಬೆಳಗ್ಗೆ 11.20ರ ಸುಮಾರಿಗೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಆಗಮಿಸಿದರು. ಸೆ.17ರಂದು ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್​ ಇಬ್ಬರೂ ಸಿಸಿಬಿ ವಿಚಾರಣೆ ಎದುರಿಸಿದ್ದರು. ಮತ್ತೊಂದು ಸುತ್ತಿನ ವಿಚಾರಣೆಗಾಗಿ ಬುಧವಾರ ಬೆಳಗ್ಗೆ 11ಕ್ಕೆ ಆಗಮಿಸುವಂತೆ ದಿಗಂತ್​ಗೆ ಮಾತ್ರ ಸಿಸಿಬಿ ನೋಟಿಸ್​ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 25 ನಿಮಿಷ ತಡವಾಗಿ ರಹಸ್ಯ ಸ್ಥಳದಿಂದ ಬಂದ ದಿಗಂತ್​, ನೇರವಾಗಿ ಸಿಸಿಬಿ ಕಚೇರಿ ಒಳಹೋದರು. … Continue reading ಡ್ರಗ್ಸ್​ ಕೇಸ್​; ಸಿಸಿಬಿ ವಿಚಾರಣೆಗೆ ಬಂದ ದಿಗಂತ್​