ಮಹಿಳಾ ಡ್ರಗ್ ಇನ್ಸ್​ಪೆಕ್ಟರ್​ಗೆ ಗುಂಡಿಕ್ಕಿ ಹತ್ಯೆ ಮಾಡಿ ತನ್ನ ಮೇಲೂ ಗುಂಡಿನ ದಾಳಿ ಮಾಡಿಕೊಂಡ

ಚಂಡೀಗಢ: ಮಹಿಳಾ ಡ್ರಗ್​ ಇನ್ಸ್​ಪೆಕ್ಟರ್​ ಒಬ್ಬರನ್ನು ಕಚೇರಿಯಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್​ನ ಖರರ್​ ಪಟ್ಟಣದಲ್ಲಿ ಶುಕ್ರವಾರ ನಡೆದಿರುವುದಾಗಿ ವರದಿಯಾಗಿದೆ.

ಆರೋಪಿ ತನ್ನದೆ ಪರವಾನಗಿ ಪಡೆದಿರುವ ರಿವಾಲ್ವರ್​ನಿಂದ ಇನ್ಸ್​ಪೆಕ್ಟರ್​ರನ್ನು ಗುರಿಯಾಗಿರಿಸಿಕೊಂಡು ಎರಡು ಸುತ್ತಿನ ಗುಂಡಿನ ದಾಳಿ ನಡೆಸಿ, ಬಳಿಕ ತನ್ನಮೇಲೂ ಶೂಟ್​ ಮಾಡಿಕೊಂಡಿದ್ದಾನೆ. ಇದರ ಹೊರತಾಗಿಯೂ ಆರೋಪಿ ಬದುಕುಳಿದಿದ್ದು, ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನೇಹಾ ಶೋರಿ ಮೃತ ಇನ್ಸ್​ಪೆಕ್ಟರ್​. ಅವರನ್ನು ಖರರ್​ನಲ್ಲಿರುವ ಡ್ರಗ್ ಅಂಡ್​ ಫುಡ್ ಕೆಮಿಕಲ್ ಲ್ಯಾಬೊರೇಟರಿಯ ವಲಯ ಪರವಾನಗಿ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು.

ಘಟನೆ ಬಗ್ಗೆ ಮಾತನಾಡಿರುವ ಪಂಜಾಬ್​ನ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಪ್ರಕರಣದ ಶೀಘ್ರ ತನಿಖೆಗಾಗಿ ಅಧಿಕಾರಿಗಳಿಗೆ ಆದೇಶಿಸಿದ್ದು, ಆರೋಪಿಗೆ ಸೂಕ್ತ ಶಿಕ್ಷೆ ನೀಡುವಂತೆ ಸೂಚಿಸಿದ್ದಾರೆ. (ಏಜೆನ್ಸೀಸ್​)