ಬರ ಹಿನ್ನೆಲೆ ಕೆಂಪೇಗೌಡ ಜಯಂತಿ ಸರಳವಾಗಿ ಆಚರಣೆ

ಕೊಳ್ಳೇಗಾಲ: ಬರ ಹಿನ್ನೆಲೆ ಕೆಂಪೇಗೌಡ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರಳವಾಗಿ ಆಚರಿಸಲು ಗುರುವಾರ ಶಾಸಕ ಆರ್.ನರೇಂದ್ರ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಬಾರಿ ಪಟ್ಟಣದಲ್ಲಿ ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಅಲ್ಲದೆ ಭಾವಚಿತ್ರ ಮೆರವಣಿಗೆ ನಡೆಸಲಾಗಿತ್ತು. ಆದರೆ, ಈಗ ಬರ ಇರುವುದರಿಂದ ಜಯಂತಿಯನ್ನು ಸರಳವಾಗಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ 10-30 ಗಂಟೆಗೆ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ತಹಸೀಲ್ದಾರ್ ಕೆ.ಕುನಾಲ್ ಅವರಿಗೆ ಸೂಚಿಸಿದರು. ಜಯಂತಿ ಆಚರಣೆಗೆ ಹೆಚ್ಚು ಸಮಯವಿಲ್ಲದ ಕಾರಣ ತುರ್ತಾಗಿ, ತಾಲೂಕಿನ ಚುನಾಯಿತ ಜನ ಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ಆಹ್ವಾನಿಸಬೇಕು ಎಂದರು.

ಕೆಂಪೇಗೌಡರ ಜಯಂತಿ ಸರಳವಾಗಿದ್ದರೂ, ಶಿಷ್ಟಚಾರಕ್ಕೆ ಕೊರತೆಯಿರಬಾರದು. ತಾಲೂಕು ಮಟ್ಟದ ಅಧಿಕಾರಿಗಳೆಲ್ಲರೂ ತಪ್ಪದೆ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವ ಸಲ್ಲಿಸಬೇಕು ಎಂದರು.

ಸಭೆಯಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್ ಕುಮಾರ್, ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಜೇಗೌಡ, ಕಾರ್ಯದರ್ಶಿ ಸಿದ್ದಲಿಂಗೇಗೌಡ, ಡಾ.ಬಾಬು ಜಗಜೀವನರಾಂ ಒಕ್ಕೂಟದ ಅಧ್ಯಕ್ಷ ಬಾಲರಾಜು, ಹನೂರು ತಹಸೀಲ್ದಾರ್ ನಾಗರಾಜು, ತಾಪಂ ಇಒ ಉಮೇಶ್, ಬಿಇಒ ಚಂದ್ರಪಾಟೀಲ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್.ಶಶಿಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್, ನಗರಸಭೆ ಆಯುಕ್ತ ನಾಗಶೇಟ್ಟಿ, ಪಟ್ಟಣ ಠಾಣೆ ಪಿಎಸ್‌ಐ ಜಿ.ರಾಜೇಂದ್ರ, ಕೃಷಿ ಅಧಿಕಾರಿ ರಮೇಶ್ ಇತರರಿದ್ದರು.

Leave a Reply

Your email address will not be published. Required fields are marked *