ಬೆಂಗಳೂರು: ಮಿಕ್ಸಿಯಲ್ಲಿನ ಮೋಟಾರ್ ಹಾಗೂ ಟಿವಿಯ ಬಿಡಿಭಾಗಗಳನ್ನು ಬಳಸಿ 600 ಡ್ರೋನ್ಗಳನ್ನು ತಯಾರಿಸಿದ್ದೇನೆ. ನನಗೆ ಸಾಕಷ್ಟು ಪ್ರಶಸ್ತಿಗಳು ಹಾಗೂ ವಿದೇಶಿ ಕಂಪನಿಗಳಿಂದ ಆಫರ್ ಬಂದಿವೆ ಎಂದು ಕಟ್ಟುಕತೆ ಕಟ್ಟಿದ್ದ ನಕಲಿ ವಿಜ್ಞಾನಿ ಡ್ರೋನ್ ಪ್ರತಾಪ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನೆಟ್ಟಿಗರ ವಿರುದ್ಧ ಪ್ರತಾಪ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಡ್ರೋನ್ ಪ್ರತಾಪ್ ಬಡತನದ ಬೇಗೆ ಕಟ್ಟುಕಥೆ: ಅವನ ಕುಟುಂಬ ಹಿನ್ನೆಲೆ ಏನು ಗೊತ್ತಾ?
ಡ್ರೋನ್ ಪ್ರತಾಪ್ ಅವರು ಆತ್ಮಹತ್ಯೆ ಶರಣಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ ವಿರುದ್ದ ಪ್ರತಾಪ್ ಕಿಡಿಕಾರಿದ್ದಾರೆ.
ವೈರಲ್ ಆಗಿರುವ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿ, ನನ್ನ ಕುಟುಂಬ ಚಿಂತೆಗೀಡಾಗಿದೆ. ಕೆಲವು ಜನರು ತಮ್ಮ ಮಿತಿಗಳನ್ನು ಮೀರುತ್ತಿದ್ದಾರೆ. ನಾನು ಈ ಬಗ್ಗೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನಾನು ಜೀವಂತವಾಗಿದ್ದೇನೆ ದಯವಿಟ್ಟು ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಮನವಿಯೊಂದಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ‘ಕರ್ನಾಟಕದ ನೆರೆ ಹಾವಳಿಯಲ್ಲೂ ನನ್ನದೇ ಡ್ರೋನ್ ಬಳಕೆ- ಸತ್ಯ ಶೀಘ್ರ ಬಹಿರಂಗಪಡಿಸುವೆ‘
https://www.instagram.com/p/CCnoKVrn-Wu/
ಇದನ್ನೂ ಓದಿ: ಯಾಮಾರಿಬಿಟ್ಟೆನಪ್ಪಾ… ಕಣ್ಣು ಕಿತ್ತರೂ ನಿದ್ದೆ ಬರ್ತಿಲ್ಲ: ಜಗ್ಗೇಶ್ ನೋವಿನ ನುಡಿ
ಅಂದಹಾಗೆ ಡ್ರೋನ್ ಪ್ರತಾಪ್ ಅವರ ಅಸಲಿಯತ್ತು ಬಯಲಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಾಪ್ ಅವರು ಅನೇಕ ವೇದಿಕೆಗಳಲ್ಲಿ ಮಾತನಾಡಿರುವ ವಿಡಿಯೋವನ್ನು ಟ್ರೋಲ್ ಮಾಡಲಾಗುತ್ತಿದೆ. ಅವರ ಫೋಟೋಗಳ ಮೇಲೆ ಕಮೆಂಟ್ ಮಾಡಿ ಹರಿಬಿಡಲಾಗುತ್ತಿದೆ. ಇದರ ನಡುವೆ ಅವರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂಬ ಪೋಸ್ಟ್ ಸಹ ವೈರಲ್ ಆಗಿದ್ದು, ಪ್ರತಾಪ್ ಆಕ್ರೋಶಕ್ಕೆ ಕಾರಣವಾಗಿದೆ.
ಡ್ರೋನ್ ತಯಾರಿಸಿದ್ದಾಗಿ ರೈಲು ಬಿಟ್ಟ ಪ್ರತಾಪ್: ಐಷಾರಾಮಿ ಜೀವನ ನಡೆಸುತ್ತಿರುವ ನಕಲಿ ವಿಜ್ಞಾನಿ