ಟೆಲ್ ಆವಿವ್: ರಾಜಧಾನಿ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು, ಗಾಂಜಾ ಸೇರಿ ವಿವಿಧ ಮಾದಕ ವಸ್ತುಗಳಿಗಾಗಿ ಭಾರಿ ಶೋಧ ನಡೆಸಿದ್ದಾರೆ. ಆದರೆ, ಅತ್ತ ಇಸ್ರೇಲ್ನಲ್ಲಿ “ಗಾಂಜಾ ಮಳೆ”ಯೇ ಸುರಿಯುತ್ತಿದೆ.
ಇಸ್ರೇಲ್ನ ಕೃಷಿ ಇಡೀ ಜಗತ್ತನ್ನೇ ತನ್ನೆಡೆಗೆ ಸೆಳೆದಿದೆ. ಅಂಥದ್ದರಲ್ಲಿ ಗಾಂಜಾ ಬೆಳೆಯಷ್ಟೇ ಅಲ್ಲ, ಮಳೆ ಕೂಡ ಆಗುತ್ತದೆ ಎಂದರೆ ಹೇಗಿರಬೇಡ. ಆದರೆ ವಾಸ್ತವ ಹೀಗಿದೆ.
ಇಸ್ರೇಲ್ ರಾಜಧಾನಿ ಟೆಲ್ ಆವಿವ್ನ ರಬಿನ್ ಸ್ಕೇರ್ನಲ್ಲಿ ಗಾಂಜಾ ಮಳೆ ಸುರಿದಿದೆ. ಗಾಂಜಾ ತುಂಬಿದ್ದ ನೂರಾರು ಪ್ಯಾಕೆಟ್ಗಳನ್ನು ಡ್ರೋನ್ ಮೂಲಕ ಸುರಿಸಲಾಗಿದೆ. ಇದಕ್ಕೆ ‘ಗಾಂಜಾ ಮಳೆ’ ಯೋಜನೆ ಎಂದೇ ಹೆಸರಿಸಲಾಗಿದೆ. ಅಂತೆಯೇ ಜನರು ಕೂಡ ಮುಗಿಬಿದ್ದು ಗಾಂಜಾ ಪ್ಯಾಕೆಟ್ಗಳನ್ನು ಆರಿಸಿಕೊಂಡಿದ್ದಾರೆ. ಇದರ ವಿಡಿಯೋ ಕೂಡ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ; VIDEO: ಊಟದಲ್ಲಿ ಕೂದಲು.., ಆದರೆ ಬಂದಿದ್ದೆಲ್ಲಿಂದ? ಸಿಸಿ ಕ್ಯಾಮರಾ ದೃಶ್ಯದಲ್ಲಿ ಬಯಲಾಯ್ತು ಸತ್ಯ…!
ಗ್ರೀನ್ ಡ್ರೋನ್ಸ್ ಎನ್ನುವ ಸಂಘಟನೆ ಈ ಕೃತ್ಯದ ಹೊಣೆ ಹೊತ್ತಿದೆ. ಇಸ್ರೇಲ್ನಲ್ಲಿ ಗಾಂಜಾ ಸೇವನೆ ಕಾನೂನುಬದ್ಧಗೊಳಿಸಬೇಕು ಎನ್ನುವುದು ಈ ಸಂಘಟನೆ ಬೇಡಿಕೆಯಾಗಿದೆ. ಫ್ರೀ ಲವ್ ಎನ್ನುವುದು ಇದರ ಧ್ಯೇಯವಾಕ್ಯ.
ಉಚಿತವಾಗಿ ಗಾಂಜಾ ಹಂಚುವುದು ಇದರ ಉದ್ದೇಶವಾಗಿದೆ. ಈ ಯೋಜನೆಗೆ ಯೋಜನೆಗೆ ಗಾಂಜಾ ಮಳೆ ಎಂದು ಹೆಸರು ನೀಡಲಾಗಿದೆ. ಒಂದೊಂದು ಬ್ಯಾಗ್ನಲ್ಲಿ ಎರಡು ಗ್ರಾಂ ಗಾಂಜಾ ಇಟ್ಟು ಅಂಥ ನೂರಾರು ಪ್ಯಾಕೆಟ್ಗಳನ್ನು ಹಂಚುತ್ತಿದೆ. ಕರೊನಾ ಸಂಕಷ್ಟದ ನಡುವೆ ವಿಶೇಷವಾಗಿ ಏನನ್ನಾದರೂ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು ಎನ್ನುವುದು ಇದನ್ನು ಹಂಚಿದ ಯುವಕರ ಉದ್ಧೇಶವಾಗಿತ್ತಂತೆ.
ಇಸ್ರೇಲ್ನಲ್ಲಿ ವೈದ್ಯಕೀಯ ಉದ್ದೇಶ ಹೊರತುಪಡಿಸಿ, ಗಾಂಜಾ ನಿಷೇಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
הזייה בכיכר רבין: רחפן הטיל מהשמיים עשרות שקיות של מריחואנה. מי שעומד מאחורי המיזם זאת קבוצה שמכנה את עצמה "הרחפן הירוק". בגלל שלא חישבו נכון את הרוח, רוב החומר התפזר על הכביש באבן גבירול. עוברי אורח נהנו מהשלל@ynetalerts pic.twitter.com/xeziJsH950
— איתי בלומנטל Itay Blumental (@ItayBlumental) September 3, 2020