VIDEO: ಕಾರಿನ ಗಾಜನ್ನು ಛಿದ್ರಗೊಳಿಸಿ ಒಳನುಗ್ಗಿದ ಕಳ್ಳಿಯ ತುಂಡು: ಅಪಾಯದಿಂದ ಪಾರಾದ ಚಾಲಕನನ್ನು ಬಂಧಿಸಿದ ಪೊಲೀಸರು

ವಾಷಿಂಗ್ಟನ್​: ಅಮೆರಿಕದ ಅರಿಜೋನ್​ ಪ್ರದೇಶದ ಕಾರು ಚಾಲಕನೊಬ್ಬ ಕಳ್ಳಿ ಗಿಡಗಳು ಬೆಳೆದು ನಿಂತಿದ್ದ ಮರುಭೂಮಿ ಪ್ರದೇಶಕ್ಕೆ ಆಕಸ್ಮಿಕವಾಗಿ ನುಗ್ಗಿದ ಪರಿಣಾಮ ಕಳ್ಳಿಯ ಕಾಂಡದ ಭಾರಿ ಗಾತ್ರದ ತುಂಡೊಂದು ಕಾರಿನ ಮುಂಭಾಗದ ಗಾಜನ್ನು ಸಂಪೂರ್ಣ ಹೊಡೆದು ಕಾರಿನೊಳಗೆ ನುಗಿದ್ದು, ಚಾಲಕ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ.

ಟುಸ್ಕಾನ್​ ಎಂಬ ಕಾರಿನಲ್ಲಿ ತೆರಳುತ್ತಿದ್ದ ಕೈ ಸ್ಕಾಟ್​(39) ಎಂಬಾತ ಬೆಳಗಿನ ಜಾವ ಸುಮಾರು 9.30ರ ಸಮಯದಲ್ಲಿ ಕಳ್ಳಿ ಬೆಳೆದು ನಿಂತಿದ್ದ ಮರೂಭೂಮಿ ಪ್ರದೇಶಕ್ಕೆ ನುಗ್ಗಿದ್ದಾನೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಚಾಲಕ ಅದೃಷ್ಟ ರೀತಿಯಲ್ಲಿ ಅವಘಡದಿಂದ ಪಾರಾಗಿದ್ದಾನೆ.

ಅಪರಾಧ ಚಟುವಟಿಕೆಯ ಬಳಿಕ ಅದರಿಂದ ಪಾರಾಗಲೂ ಗಾಬರಿಗೊಂಡು ಕಾರು ಚಾಲನೆ ಮಾಡುವಾಗ ಘಟನೆ ಸಂಭವಿಸಿದೆ ಎಂಬ ಶಂಕೆ ಮೇಲೆ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *