ಊಟಿಗೆ ಬಾಡಿಗೆಗೆ ಹೋದವನು ನೀಲಗಿರಿ ತೋಪಿನಲ್ಲಿ ಸುಟ್ಟು ಕರಕಲಾದ ಕರುಣಾಜನಕ ಕತೆಯಿದು…

ಬೆಂಗಳೂರು: ಹೊಸ ಇನ್ನೋವಾ ಕಾರಿಗಾಗಿ ಚಾಲಕನೊಬ್ಬನನ್ನು ಸುಟ್ಟು ಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ನೆಲಮಂಗಲದ ಹೊರವಲಯದಲ್ಲಿ ನಡೆದಿದೆ.

ತುಮಕೂರು ನಿವಾಸಿ ಕೆಂಪೇಗೌಡ (38) ಕೊಲೆಯಾದ ದುರ್ದೈವಿ. ಮೃತ ಕೆಂಪೇಗೌಡ, ಬೆಂಗಳೂರಿನ ಖಾಸಗಿ ಕಂಪನಿಯೊಂದಲ್ಲಿ ಕಾರನ್ನು ನೋಂದಾಯಿಸಿಕೊಂಡು ಜೀವನ ಸಾಗಿಸುತ್ತಿದ್ದರು. ವಾರದಲ್ಲಿ ಶನಿವಾರ ಹಾಗೂ ಭಾನುವಾರ ಸಾಮಾನ್ಯವಾಗಿ ಕಂಪನಿಗೆ ರಜೆಯಿತ್ತು. ಹಾಗಾಗಿ ಅವರು ಮೇ 17 ರಂದು ಊಟಿಗೆ ಬಾಡಿಗೆಗೆ ಹೊರಟಿದ್ದರು. ಈ ವಿಚಾರವನ್ನು ಕೆಂಪೇಗೌಡ ಪೋನ್​ ಮಾಡಿ ತಮ್ಮ ಮನೆಯವರಿಗೆ ತಿಳಿಸಿದ್ದರು. ಆದರೆ ಎರಡು ದಿನಗಳ ಕಾಲ ಪೋನ್​​​ ಸ್ವಿಚ್​​ ಆಫ್​​​ ಬಂದಿದ್ದನ್ನು ಕಂಡು ಮನೆಯವರು ಹೆಬ್ಬಗೋಡಿ ಪೊಲೀಸ್​​​​​​​​​​​​ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು.

ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ಆರಂಭಿಸಿದ ಹೆಬ್ಬಗೋಡಿ ಠಾಣಾ ಪೊಲೀಸರು ಸೋಮವಾರ ಶವವನ್ನು ಪತ್ತೆ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಶವದ ಬಗ್ಗೆ ತಿಳಿಸುವುದರೊಂದಿಗೆ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.

ನೆಲಮಂಗಲದ ನೀಲಗಿರಿ ತೋಪಿನಲ್ಲಿ ಕೇಂಪೇಗೌಡರನ್ನು ಕೊಲೆ ಮಾಡಿ ಪೆಟ್ರೋಲ್​​ ಸುರಿದು ಸುಟ್ಟು ಹಾಕಲಾಗಿದೆ. ಅವರನ್ನು ಕಾರಿಗೆ ಹಾಗೂ ಹಣಕ್ಕಾಗಿ ಅಪಹರಿಸಲಾಗಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಸಂಬಂಧ ನೆಲಮಂಗಲ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *