ಮಹಾರಾಷ್ಟ್ರ: ( Heart Attack ) ಕಾರು ಚಾಲಕನಿಗೆ ಹೃದಯಾಘಾತವಾಗಿದ್ದು, ನಂತರ ಕಾರಿನ ನಿಯಂತ್ರಣ ತಪ್ಪಿ ಕಾರು ಸುಮಾರು ಹತ್ತು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದ ಈ ಅಪಘಾತದ ಆಘಾತಕಾರಿ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಧೀರಜ್ ಪಾಟೀಲ್ (55) ಅವರು ಮೋರಿಸ್ ಗ್ಯಾರೇಜ್ ವಿಂಡ್ಸರ್ ಕಾರನ್ನು ಚಲಾಯಿಸುತ್ತಿದ್ದಾಗ, ಫ್ಲೈಓವರ್ ಬಳಿ ಕಾರು ನಿಯಂತ್ರಣ ತಪ್ಪಿ ಆಟೋರಿಕ್ಷಾ, ಕಾರು, ದ್ವಿಚಕ್ರ ವಾಹನ ಮತ್ತು ಇತರ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಸೇರಿದಂತೆ ಹಲವಾರು ವಾಹನಗಳು ತೀವ್ರವಾಗಿ ಹಾನಿಗೊಳಗಾಗಿವೆ.
ಕಾರು ಚಾಲಕ ಧೀರಜ್ ಪಾಟೀಲ್ ಮೃತಪಟ್ಟರು. ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ, ಧೀರಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕೆಲಸಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಇಡೀ ಘಟನೆ ರಸ್ತೆಬದಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ.
#Maharashtra : While driving car driver recived heart attack, big incident occured,
A video footage of kohlapur maharashtra car incident #RoadAccident#RoadSafety#Maharashtra pic.twitter.com/1rGvOlOTfY
— Dilip Kumar (@PDilip_kumar) March 15, 2025
ಕಾರು ಚಾಲಕನ ನಿಯಂತ್ರಣ ತಪ್ಪಿದ ಕಾರು ಸುಮಾರು ಹತ್ತು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕನಿಗೆ ಹೃದಯಾಘಾತವಾಗಿದ್ದು, ನಂತರ ಕಾರಿನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ಆಘಾತಕಾರಿ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.