ಪೂಜಾ ಕಾರ್ಯಕ್ರಮಗಳಿಗೆ ಚಾಲನೆ

ಹೊಳೆನರಸೀಪುರ: ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಮಾ. 13ರಿಂದ ಏ.14ರವರೆಗೆ ನಿತ್ಯ ಸ್ವಾಮಿಗೆ ಪಂಚಾಮೃತ ಅಭಿಷೇಕದೊಂದಿಗೆ ಧಾರ್ಮಿಕ ಪೂಜೆ, ರಥ ಬೀದಿ ಉತ್ಸವ ಹಾಗೂ ಪ್ರಾಕಾರೋತ್ಸವ ನಡೆಯಲಿದೆ. ಗುರುವಾರ ರಾತ್ರಿ ಕಲ್ಯಾಣೋತ್ಸವ ಜರುಗಿತು.

18ರ ರಾತ್ರಿ ದೊಡ್ಡಗರುಡೋತ್ಸವ, 20ರಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ, ಏ.6ರಂದು ಯುಗಾದಿ ಉತ್ಸವ, 14 ರಂದು ಪಂಚಾಮೃತ ಅಭಿಷೇಕ ಹಾಗೂ ಉತ್ಸವದೊಂದಿಗೆ ಧಾರ್ಮಿಕ ಕಾರ್ಯಗಳು ಮುಕ್ತಾಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.