ಶಿಕಾರಿಪುರ: ಕ್ಷೇತ್ರ ದೇವತೆ ಶ್ರೀ ಮಾರಿಕಾಂಬಾ ದೇವಿ ಜಾತ್ರೋತ್ಸವಕ್ಕೆ ಮಂಗಳವಾರದಂದು ಸಂಪ್ರದಾಯದಂತೆ ದೇವಿಗೆ ವಿಶೇಷವಾದ ಪೂಜೆ, ಅಭಿಷೇಕ, ಕುಂಕುಮಾರ್ಚನೆಯೊಂದಿಗೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.
ಸೋಮವಾರ ರಾತ್ರಿ ದೇವಾಲಯದ ಪ್ರಾಂಗಣದಲ್ಲಿ ರಾಕ್ಷೋಜ್ಞ, ವಾಸ್ತು ಹೋಮ ಹವನಗಳು ನಡೆದವು. ಮಂಗಳವಾರ ಬೆಳಗ್ಗೆ ಮೊದಲು ತೇರುಬೀದಿಯಲ್ಲಿರುವ ಶ್ರೀ ಮಾರಿಕಾಂಬಾ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ, ಮಂಗಳಾರತಿ ನೆರವೇರಿತು. ನಂತರ ಕಾನೂರು ದುರ್ಗಮ್ಮ ದೇವಿಗೆ ಅಭಿಷೇಕ, ವಿಶೇಷ ಅಲಂಕಾರ, ಮಂಗಳಾರತಿ ಮಾಡಲಾಯಿತು. ನಂತರ ಶ್ರೀ ಮಾರಿಕಾಂಬೆ ದೇವಿಗೆ ಅಭಿಷೇಕ, ವಿಶೇಷ ಅಲಂಕಾರ, ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳು ಜರುಗಿದವು. ದುರ್ಗಾ ಪಾರಾಯಣ, ಅಷ್ಟೋತ್ತರ ಪಾರಾಯಣ, ಕುಂಕುಮಾರ್ಚನೆ, ದೇವಸ್ಥಾನ ಸಮಿತಿಯಿಂದ ಮತ್ತು ಸಂಸದರಿಂದ ಲೋಕಕಲ್ಯಾಣಾರ್ಥ ನಡೆಯುವ ಸಂಕಲ್ಪ ಪೂಜೆ ನೆರವೇರಿತು.
ಮಂಗಳವಾರ ಜಾತ್ರೆಗೆ ಚಾಲನೆ ದೊರೆತ ನಂತರ ಸುಮಂಗಲಿಯರು ಆಗಮಿಸಿ ಉಡಿ ತುಂಬುವ ಕಾರ್ಯ ಮಾಡಿದರು. ದೇವಳದ ಪ್ರಾಂಗಣದಲ್ಲಿ ಮಾತೆಯರು ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ಮಾಡಿದರು. ನಂತರ ಅಮ್ಮನವರ ಜಾತ್ರೋತ್ಸವದ ಪ್ರಯುಕ್ತ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ನೂತನ ರಥದಲ್ಲಿ ಹೊರಟ ದೇವಿಯ ಮೆರವಣಿಗೆ ಶ್ರೀ ಮಾರಿಕಾಂಬಾ ಗದ್ದುಗೆಗೆ ಆಗಮಿಸಿತು. ನಂತರ ಕ್ಷೇತ್ರಾಧಿಪತಿ ಶ್ರೀ ಹುಚ್ಚುರಾಯಸ್ವಾಮಿ, ದುಗಾರ್ಂಬಾ ಮತ್ತು ಕಾನೂರು ಬಸವೇಶ್ವರ ದೇಗುಲದ ನಂತರ ಸ್ವಸ್ಥಾನಕ್ಕೆ ಮರಳಿತು.
ಶ್ರೀ ಮಾರಿಕಾಂಬೆ ಜಾತ್ರೋತ್ಸವಕ್ಕೆ ಚಾಲನೆ

You Might Also Like
ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic
garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…
ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups
Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…
18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs
Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…