ಸಸಿ ನೆಡುವ ಕಾರ್ಯಕ್ಕೆ ಚಾಲನೆ

ಮಡಿಕೇರಿ: ವನಮಹೋತ್ಸವ ಅಂಗವಾಗಿ ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆ ವ್ಯಾಪ್ತಿಯಲ್ಲಿ 200 ಸಸಿ ನೆಡುವ ಕಾರ್ಯಕ್ಕೆ ಜಿಲ್ಲಾ ರೋಟರಿಯ ಮಾಜಿ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಚಾಲನೆ ನೀಡಿದರು.

ರೋಟರಿ ಕ್ಲಬ್ ಅಧ್ಯಕ್ಷ ರತನ್ ತಮ್ಮಯ್ಯ ಮಾತನಾಡಿ, ಕಾಡಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ವೃಕ್ಷಸಂಕುಲ ಹೆಚ್ಚಿಸುವ ಹೊಣೆಗಾರಿಕೆ ರೋಟರಿಯಂತಹ ಸಾಮಾಜಿಕ ಸೇವಾ ಸಂಸ್ಥೆ ಮೇಲಿದೆ ಎಂದು ಹೇಳಿದರು.

ಮಡಿಕೇರಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ.ಕಾರ್ಯಪ್ಪ, ನಿರ್ದೇಶಕರಾದ ಅನಿಲ್ ಕೃಷ್ಣಾನಿ, ಎಂ.ಎಂ.ಕಾರ್ಯಪ್ಪ, ಲತಾರಾಘವನ್, ರಾಜರಾಜೇಶ್ವರಿ ಪಿಯು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ದಕ್ಷಿಣ ವಾಸುದೇವ್, ಕಾರ್ಯದರ್ಶಿ ಸಚಿನ್ ವಾಸುದೇವ್, ಅರಣ್ಯ ಇಲಾಖೆಯ ಅಧಿಕಾರಿ ಜಗದೀಶ್, ಬಾಬುರಾವ್, ಸಿಬ್ಬಂದಿ, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *