ಅಧ್ಯಯನ ಪ್ರವಾಸಕ್ಕೆ ಚಾಲನೆ

ಮಂಡ್ಯ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್) ಹಾಗೂ ಸಾವಯವ ಕೃಷಿಕರ ಸಹಕಾರ ಸಂಘ, ಆರ್ಗ್ಯಾನಿಕ್ ಮಂಡ್ಯ ಸಂಸ್ಥೆ ವತಿಯಿಂದ ಆಯೋಜಿಸಿರುವ ‘ಸಾವಯವ ಕೃಷಿಕರ ಅಧ್ಯಯನ ಪ್ರವಾಸಕ್ಕೆ’ ಆರ್ಗ್ಯಾನಿಕ್ ಸಂಸ್ಥೆಯ ಕಾರ್ಯದರ್ಶಿ ಸಿ.ಮಧುಚಂದನ್ ಚಾಲನೆ ನೀಡಿದರು.

ಬಳಿಕ ಮಾತನಾಡಿ, ರೈತರು ಒಂದೊಂದು ಭಾಗಗಳಲ್ಲಿ ಒಂದೊಂದು ರೀತಿಯ ಕೃಷಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಜಿಲ್ಲೆಯ ರೈತರಿಗೆ ಹಾಸನ ಜಿಲ್ಲೆಯ ಪ್ರಗತಿಪರ ರೈತರ ಕೃಷಿಯ ಬಗ್ಗೆ ಪರಿಚಯಿಸುವ ಉದ್ದೇಶದಿಂದ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ ಎಂದರು.

ಕೆಲ ಪ್ರಗತಿಪರ ರೈತರು ಕೃಷಿಯನ್ನು ಲಾಭದಾಯಕವಾಗಿಸಿಕೊಂಡಿದ್ದು, ಅವರ ಬೆಳೆ ಪದ್ಧತಿ, ಲಾಭ ಪಡೆದಿರುವ ಬಗ್ಗೆ ನಮ್ಮ ರೈತರಿಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಸಂಸ್ಥೆಯ ಸಿಇಒ ಕಾರಸವಾಡಿ ಮಹದೇವು ಮಾತನಾಡಿ, ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲು ಸಾವಯವ ರೈತ ಕೂಟ, ಕೀರೆಮಡಿ ರೈತ ಕೂಟದ ಸದಸ್ಯರಿಗೆ ಎರಡು ದಿನಗಳ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ಪ್ರಗತಿಪರ ಸಾವಯವ ಕೃಷಿಕರ ಜಮೀನುಗಳಿಗೆ ಭೇಟಿ ನೀಡಿ, ಬೆಳೆಗಳು ಮತ್ತು ನಿರ್ವಹಣೆಯ ಬಗ್ಗೆ ತಿಳಿಸಿಕೊಡಲಾಗುವುದು ಎಂದರು.
ಸಂಸ್ಥೆಯ ಮಂಜು, ಮೋಹನ್, ಅಶೋಕ, ಹರೀಶ್, ವರಲಕ್ಷ್ಮೀ, ಸವಿತಾ, ಜಯಲಕ್ಷ್ಮೀ ಇತರರಿದ್ದರು.

Leave a Reply

Your email address will not be published. Required fields are marked *