blank

ಕಾರಿನಲ್ಲೇ ಕೂತು ಲಸಿಕೆ ಪಡೆಯಿರಿ ! ಪ್ರತಿ ವಲಯದಲ್ಲೂ ಡ್ರೈವ್​ಇನ್ ಲಸಿಕಾ ಕೇಂದ್ರಗಳ ಸ್ಥಾಪನೆ

blank

ಮುಂಬೈ: ಕರೊನಾ ಲಸಿಕೆ ಪಡೆಯಲು ಜನರು ಸಾಮಾಜಿಕ ಅಂತರ ಮರೆತು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಮತ್ತು ಹಿರಿಯ ನಾಗರೀಕರಿಗೆ – ಅಂಗವಿಕಲರಿಗೆ ಅನುಕೂಲ ಕಲ್ಪಿಸಲು ಮುಂಬೈನಲ್ಲಿ ಡ್ರೈವ್​ಇನ್ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಈಗಾಗಲೇ ನಗರದ ದಾದರ್​ನಲ್ಲಿ ಈ ತೆರನ ಮೊದಲ ಕೇಂದ್ರ ಆರಂಭವಾಗಿದ್ದು, ಸದ್ಯದಲ್ಲೇ ಪ್ರತಿಯೊಂದು ವಲಯದಲ್ಲೂ ಸ್ಥಾಪಿಸಲಾಗುವುದು ಎನ್ನಲಾಗಿದೆ.

ದೊಡ್ಡ ತೆರೆದ ಮೈದಾನಗಳಲ್ಲಿ ಈ ಡ್ರೈವ್​ಇನ್ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅದಕ್ಕಾಗಿ ಅಂಧೇರಿ ಸ್ಪೋರ್ಟ್ಸ ಕ್ಲಬ್ ಗ್ರೌಂಡ್, ಕೋಆಪರೇಜ್ ಗ್ರೌಂಡ್, ಶಿವಾಜಿ ಕ್ರೀಡಾಂಗಣ, ರಿಲಯನ್ಸ್​ ಜಿಯೊ ಗಾರ್ಡನ್, ವಾಂಖೇಡೆ ಕ್ರೀಡಾಂಗಣದಂತಹ ಸ್ಥಳಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಸಾಧ್ಯವಾದಷ್ಟೂ ಇನ್ನು 24 ಗಂಟೆಗಳಲ್ಲಿ ಈ ಲಸಿಕಾ ಕೇಂದ್ರಗಳಿಗೆ ಸವಲತ್ತು ಸೃಷ್ಟಿಸುವಂತೆ ಮುಂಬೈ ನಗರ ಪಾಲಿಕೆ ತನ್ನ ಅಧಿಕಾರಿಗಳಿಗೆ ಸೂಚಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಐದು ದಿನ ಸಂಪೂರ್ಣ ಲಾಕ್​; ಸೋಮವಾರ, ಶುಕ್ರವಾರ ಅಂಗಡಿ ಓಪನ್

ತಕ್ಷಣಕ್ಕೆ ಲಸಿಕೆಗಳ ಕೊರತೆಯಿದ್ದರೂ, ಮುಂದಿನ ಯೋಜನೆಯಾಗಿ ಈ ಕೇಂದ್ರಗಳನ್ನು ಸೃಷ್ಟಿಸಲು ಪಾಲಿಕೆ ಮುಂದಾಗಿದೆ. ಈ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವ ಸ್ಥಳದಲ್ಲಿ ಆರೋಗ್ಯ ಸಿಬ್ಬಂದಿ ಕೂರಲು, ಲಸಿಕೆ ಪಡೆದ ಮೇಲೆ ಯಾವುದೇ ಅಡ್ಡಪರಿಣಾಮಗಳಾದಲ್ಲಿ ಚಿಕಿತ್ಸೆ ನೀಡಲು ತಾತ್ಕಾಲಿಕ ಶೆಲ್ಟರ್​ ರೂಪಿಸಲಾಗುವುದು. ಜೊತೆಗೆ ಒಂದು ಆ್ಯಂಬುಲೆನ್ಸ್​ಅನ್ನು ಕೂಡ ನಿಯುಕ್ತಿ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ದಾದರ್​ನಲ್ಲಿ ಈ ವಾರ ಆರಂಭವಾದ ಮೊದಲ ಡ್ರೈವ್​ ಇನ್ ಲಸಿಕಾ ಕೇಂದ್ರವು ದಿನವೊಂದಕ್ಕೆ 5,000 ಜನರಿಗೆ ಲಸಿಕೆ ನೀಡುವ ಸಾಮರ್ಥ್ಯ ಹೊಂದಿದೆ. ಆಸ್ಪತ್ರೆಗಳೊಳಗೆ ಉದ್ದ ಸಾಲುಗಳಲ್ಲಿ ಜನಜಂಗುಳಿ ಉಂಟಾಗುವುದಕ್ಕೆ ಬದಲಾಗಿ ತೆರೆದ ಜಾಗದಲ್ಲಿ ಸೋಂಕು ತಗುಲುವ ಅತಿ ಕಡಿಮೆ ಸಾಧ್ಯತೆಯೊಂದಿಗೆ ಜನರಿಗೂ ವಾಹನದಲ್ಲೇ ಕೂತು ಲಸಿಕೆ ಪಡೆಯುವ ಅವಕಾಶ ಲಭ್ಯವಾಗಲಿದೆ. (ಏಜೆನ್ಸೀಸ್)

ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆ : ಯಾವುದಕ್ಕೆ ಎಷ್ಟು ದುಡ್ಡು… ವಿವರ ಇಲ್ಲಿದೆ

VIDEO | ಕೇಂದ್ರ ಸಚಿವರ ವಾಹನದ ಮೇಲೆ ‘ಟಿಎಂಸಿ ಗೂಂಡಾ’ಗಳಿಂದ ಅಟ್ಯಾಕ್​ !

Share This Article

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…

Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?

Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…