ಬೆಳಗಾವಿ: ಸರ್ಕಾರಿ ಯೋಜನೆಗಳ ಫಲಕ ಪ್ರದರ್ಶನಕ್ಕೆ ಚಾಲನೆ

ಬೆಳಗಾವಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಫಲಕ ಪ್ರದರ್ಶನ ಮಳಿಗೆಯನ್ನು ಶಾಸಕ ಅನಿಲ ಬೆನಕೆ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸರ್ಕಾರ ಜಾರಿಗೆ ತಂದಿರುವ ಬಹುತೇಕ ಯೋಜನೆಗಳು ಮಾಹಿತಿ ಕೊರತೆಯಿಂದ ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ವಿಫಲವಾಗುತ್ತಿವೆ. ಈ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜನರ ಅನುಕೂಲಕ್ಕಾಗಿ ಜನನಿಬೀಡ ಸ್ಥಳಗಳಲ್ಲಿ ಸರ್ಕಾರದ ಯೋಜನೆಗಳ ಕುರಿತು ವಸ್ತು ಪ್ರದರ್ಶನ ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಾದ ಬಡವರ ಬಂಧು, ಅಮೃತ ಯೋಜನೆ, ಹಸಿರು ಕರ್ನಾಟಕ, ಜನತಾ ದರ್ಶನ, ಋಣಮುಕ್ತ ಪರಿಹಾರ ಕಾಯ್ದೆ, ಬೆಳೆ ಸಮೀಕ್ಷೆ, ಶಾಲಾ ಕಾಲೇಜುಗಳಿಗೆ ಮೂಲ ಸೌಕರ್ಯ, ದಿಶಾ, ಬಡ್ಡಿ ರಹಿತ ಸಾಲ ನೀಡುವ ಕಾಯಕ ಯೋಜನೆ, ಅವಕಾಶ ವಂಚಿತರ ಅಭ್ಯುದಯಕ್ಕೆ ಮಹಾಹೆಜ್ಜೆ, ಕೈಗಾರಿಕಾ ಕ್ಲಸ್ಟರ್ ಯೋಜನೆ, ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ, ಆಧುನಿಕ ಕೃಷಿ ಯೋಜನೆ, ಆಯುಷ್ಮಾನ್ ಭಾರತ ಕರ್ನಾಟಕ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿ ನೀಡುವ ಆಕರ್ಷಕ ಫಲಕಗಳು ಪ್ರದರ್ಶನದಲ್ಲಿ ಸಾರ್ವಜನಿಕರ ಗಮನ ಸೆಳೆದವು.

Leave a Reply

Your email address will not be published. Required fields are marked *