ಠೇವಣಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಸಿದ್ದಾಪುರ: ಅಭ್ಯತ್ ಮಂಗಲ ಕೃಷಿಪತ್ತಿನ ಸಹಕಾರ ಸಂಘದ ಠೇವಣಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮದ ಹಿರಿಯ ಸಹಕಾರಿ ಟಿ.ಬಿ.ತಿಮ್ಮಯ್ಯ, ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರಿಗೆ ಅತ್ಯಂತ ಉಪಯುಕ್ತವಾಗಿವೆ. ಸಂಘಗಳ ಬೆಳವಣಿಗೆಗೆ ಎಲ್ಲರೂ ಠೇವಣಿ ಇಡುವ ಮೂಲಕ ಸಕರಿಸಬೇಕು ಎಂದರು.

ಸಂಘದ ಅಧ್ಯಕ್ಷ ಪಿ.ಸಿ.ಅಚ್ಚಯ್ಯ ಮಾತನಾಡಿ, ರೈತರು ಮತ್ತು ಸಹಕಾರಿಗಳಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿ ಕೊಂಡಿದ್ದು, ಒಂದು ತಿಂಗಳು ಅಭಿಯಾನ ನಡೆಯಲಿದೆ. ಈ ಅವಧಿಯಲ್ಲಿ ಠೇವಣಿ ಇಡುವ ಠೇವಣಿದಾರರಿಗೆ ಶೇ.9.5ರ ಆಕರ್ಷಕ ಬಡ್ಡಿ ನೀಡಲಾಗುವುದು. ಚಾಲನೆ ದಿನವೇ 20 ಲಕ್ಷ ರೂ. ಠೇವಣಿ ಸಂಗ್ರಹವಾಗಿದ್ದು, ಸಂಘದ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.

ಪಿಗ್ಮಿ ಸಾಲವನ್ನು 25 ಸಾವಿರ ರೂ.ನಿಂದ 50 ಸಾವಿರ ರೂ.ಗೆ ಏರಿಸಿ, ಕಡಿಮೆ ಬಡ್ಡಿಯಲ್ಲಿ ಚಿನ್ನದ ಮೇಲಿನ ಸಾಲ, ರೈತರಿಗೆ ಬೇಕಾದ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ವಿತರಣೆ, ಗೊಬ್ಬರಗಳ ಪೂರೈಕೆ ಮುಂತಾದ ಹಲವು ಯೋಜನೆಗಳನ್ನೂ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಅಭ್ಯತ್ ಮಂಗಲ ಗ್ರಾಮದ ಹಿರಿಯ ಸಹಕಾರಿ ಕೆ.ಎ.ವಿಶ್ವನಾಥ್, ಸಂಘದ ಉಪಾಧ್ಯಕ್ಷ ವಸಂತ್ ಕುಮಾರ್ ಹೊಸಮನೆ, ಮೇಜರ್ ಜನರಲ್ ಕಾಳೇಂಗಡ ಚಂಗಪ್ಪ ಕಾರ್ಯಪ್ಪ, ಬೆಳೆಗಾರ ಪೀಟರ್ ಇಮ್ಯಾನುವೆಲ್, ಕೆ.ಬಿ.ಶಿವಪ್ಪ, ಟಿ.ಎಸ್.ಅಂತೋಣಿ ಜೋಸೆಫ್, ಕೆ.ಎ.ಬೋಪಯ್ಯ ಇತರರು ಇದ್ದರು.