More

  ಕಿವುಡರ ಚೆಸ್ ಟೂರ್ನಿಗೆ ಚಾಲನೆ

  ಮೈಸೂರು: ಜಿಲ್ಲಾ ಕಿವುಡರ ಸಂಘ, ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ, ಅಖಿಲ ಭಾರತ ಕಿವುಡರ ಕ್ರೀಡಾ ಒಕ್ಕೂಟವು ನಾನಾ ಸಂಘಟನೆಗಳ ಸಹಯೋಗದಲ್ಲಿ ವಿಶ್ವೇಶ್ವರನಗರದ ಕೈಗಾರಿಕಾ ಪ್ರದೇಶದ ರಾಹುಲ್ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿರುವ ‘22ನೇ ರಾಷ್ಟ್ರೀಯ ಕಿವುಡರ ಚೆಸ್ ಚಾಂಪಿಯನ್‌ಶಿಪ್’ಗೆ ಬುಧವಾರ ಚಾಲನೆ ದೊರೆಯಿತು.

  ಸ್ಪರ್ಧೆಯು ಜ.12ರವರೆಗೆ ನಡೆಯಲಿದ್ದು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ದೆಹಲಿ, ತಮಿಳುನಾಡು ಸೇರಿದಂತೆ 21 ರಾಜ್ಯಗಳ ಒಟ್ಟು 210 ಆಟಗಾರರು ಭಾಗವಹಿಸಿದ್ದು, 57ಕ್ಕೂ ಹೆಚ್ಚಿನ ಮಹಿಳಾ ಆಟಗಾರರು ಭಾಗವಹಿಸಿದ್ದಾರೆ. ಇತ್ತೀಚೆಗೆ ಇಟಲಿಯಲ್ಲಿ ಮುಕ್ತಾಯಗೊಂಡ ಅಂತಾರಾಷ್ಟ್ರೀಯ ಕಿವುಡರ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದ ಮೈಸೂರಿನ ಆದಿಶ್, ಮಂಗಳೂರಿನ ಯಶಸ್ವಿನಿ ಕೂಡ ಭಾಗವಹಿಸಿರುವುದು ವಿಶೇಷವಾಗಿದೆ.

  ಸ್ಪರ್ಧೆಗೆ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‌ನ ಜಿಲ್ಲಾ ರಾಜ್ಯಪಾಲ ಡಾ.ನಾಗರಾಜ್ ವಿ.ಬೈರಿ ಚಾಲನೆ ನೀಡಿದರು. ಅಧ್ಯಕ್ಷ ಎನ್.ನಂಜುಂಡಸ್ವಾಮಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ರಾಹುಲ್ ಕನ್ವೆನ್ಷನ್ ಹಾಲ್ ಅಧ್ಯಕ್ಷ ಎಸ್.ಮೂರ್ತಿ, ಟೆಕ್ನಿಕಲ್ ಡೈರೆಕ್ಟರ್ ನಾಗೇಂದ್ರ, ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಎಸ್.ಟಿ.ಮಹೇಶ್, ಉಪಸಭಾಪತಿ ಜೆ.ವಿ.ಮಹೇಶ್ ವರ್ಮಾ, ಸಲಹೆಗಾರ ಬಿ.ಆರ್.ಮಧುಸೂದನ್ ರಾವ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts