ಸಮಗ್ರ ಕೊಡಗು ಸ್ಪಂದನಾ ಯೋಜನೆಗೆ ಚಾಲನೆ

ಮಡಿಕೇರಿ: ಯುನೈಟೆಡ್ ನೇಷನ್ ಚಿಲ್ಡ್ರನ್ಸ್ ಂಡ್ (ಯೂನಿಸ್ೆ) ರೂಪಿಸಿರುವ ಸಮಗ್ರ ಕೊಡಗು ಸ್ಪಂದನಾ ಯೋಜನೆ ಕೊಡಗಿನ ಪುನಃಶ್ಚೇತನಕ್ಕೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು.

ನಗರದ ಕೋಟೆ ಹಳೆಯ ವಿಧಾನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಂಡ್ ಆಶ್ರಯದಲ್ಲಿ ಶನಿವಾರ ನಡೆದ ‘ಸಮಗ್ರ ಕೊಡಗು ಸ್ಪಂದನಾ ಯೋಜನೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ, ಶಿಕ್ಷಣ, ನೈರ್ಮಲ್ಯ, ಶುಚಿತ್ವ, ಪೋಷಣೆ, ಶುದ್ಧ ಕುಡಿಯುವ ನೀರು, ಮಕ್ಕಳ ರಕ್ಷಣೆ ಮತ್ತಿತ್ತರ ಬಗ್ಗೆ ಅರಿವು ಮೂಡಿಸುವುದು. ಜಿಲ್ಲಾಡಳಿತ, ಜಿಪಂ ಗಮನಕ್ಕೆ ತಂದು ಅಗತ್ಯ ಸೌಲಭ್ಯ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶ. ಕೊಡಗು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸ್ಪಂದಿಸಿದಾಗ ಮಾತ್ರ ಸಾಧ್ಯ ಎಂದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭ ಎಲ್ಲರೂ ಸಹಕರಿಸಿದರು. ಯೂನಿಸ್ೆ ಸಂಸ್ಥೆ ಮಕ್ಕಳು ಮತ್ತು ಮಹಿಳೆಯರ ಶಿಕ್ಷಣ, ಆರೋಗ್ಯ ಮತ್ತು ಪೋಷಣೆಗೆ ಅಗತ್ಯ ಸಹಕಾರ ನೀಡಿದೆ ಎಂದು ಸ್ಮರಿಸಿದರು.
ಜಿಪಂ ಸಿಇಒ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಪೋಷಕಾಂಶ ಮತ್ತಿತ್ತರ ಬಗ್ಗೆ ಒತ್ತು ನೀಡಲಾಗುತ್ತದೆ. ಆ ದಿಸೆಯಲ್ಲಿ ಮುಂದಿನ 7 ತಿಂಗಳಲ್ಲಿ ಕೊಡಗು ಸಮಗ್ರ ಸ್ಪಂದನಾ ಯೋಜನೆ ಅನುಷ್ಠಾನ ಕಾರ್ಯ ನಡೆಯಲಿವೆ ಎಂದರು.
ಯೂನಿಸ್ೆ ಅಧಿಕಾರಿ ವೆಂಕಟೇಶ್ ಅರಳೀಕಟ್ಟಿ ಮಾತನಾಡಿ, ಜಿಲ್ಲಾ ಸಮಾಲೋಚಕ ಪ್ರಭಾತ್ ಎಂ.ಕಲ್ಲೂರ ಮಾತನಾಡಿದರು. ಯೂನಿಸ್ೆ ಬೆಂಗಳೂರು ಕೇಂದ್ರದ ಅಧಿಕಾರಿ ಮಮತಾ ಇದ್ದರು. ಮನೋಹರ, ಸಂಧ್ಯಾ, ಮಚ್ಚಾಡೋ ಮತ್ತಿತರರಿದ್ದರು.