ಏನಾದ್ರೂ ಮಾಡಿ ಕುಡಿವ ನೀರು ಕೊಡಿ: ಗಿಡ್ಡನಕಟ್ಟೆ ಗ್ರಾಮಸ್ಥರ ಪಟ್ಟು

ಜಗಳೂರು: ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ತಾಲೂಕಿನ ಗಿಡ್ಡನಕಟ್ಟೆ ಗ್ರಾಮಸ್ಥರು ಶನಿವಾರ ಪಂಚಾಯತ್ ರಾಜ್ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಳೆದ ಮೂರ‌್ನಾಲ್ಕು ತಿಂಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮೂರು ಬೋರ್‌ವೆಲ್‌ಗಳಲ್ಲಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆ ಗಮನಹರಿಸದೆ ಮೌನ ವಹಿಸಿದ್ದಾರೆ ಎಂದು ದೂರಿದರು.

ಮನೆಯಲ್ಲಿ ಒಬ್ಬರನ್ನಿ ನೀರು ತರುವುದಕ್ಕಾಗಿಯೇ ಪೂರ್ಣ ಪ್ರಮಾಣದಲ್ಲಿ ನಿಯೋಜಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ವ್ಯತ್ಯಯಗೊಂಡಾಗ ಸುತ್ತಲಿನ ಗ್ರಾಮಗಳಿಗೆ ತೆರಳಿ ಬೈಕ್, ಆಟೋಗಳಲ್ಲಿ ನೀರು ತರುವ ಸ್ಥಿತಿ ಇದೆ. ಏನಾದರೂ ಮಾಡಿ ನಮಗೆ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಪಟ್ಟು ಹಿಡಿದರು.

ಮನವಿ ಸ್ವೀಕರಿಸಿದ ತಾಪಂ ಇಒ ಜಾನಕಿರಾಮ್, ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ ಎಂದು ಕೆಚ್ಚೇನಹಳ್ಳಿ ಪಿಡಿಒಗೆ ಸೂಚಿಸಿದರು.

ಮುಖಂಡರಾದ ಮಂಜುನಾಥ್, ತಿಪ್ಪೇಸ್ವಾಮಿ, ಬಂಗಾರಪ್ಪ, ನಾಗರಾಜ, ಅರುಣ್ ಕುಮಾರ್, ವಿಷ್ಣು, ಮಹಾಂತೇಶ್, ಸಿ.ತಿಪ್ಪೇಸ್ವಾಮಿ, ಮಾರುತಿ, ಓಬಳೇಶ, ಹೋಚಿಬೋರಯ್ಯ, ಲೊಕೇಶ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *