26.3 C
Bengaluru
Thursday, January 23, 2020

ಜಗಳೂರಲ್ಲಿ ಕುಡಿಯುವ ನೀರಿಗೆ ಬರ

Latest News

ನಂದಿಬೆಟ್ಟದ ತುದಿಗೆ ವಾರದ 5 ದಿನಗಳು ವಾಹನಗಳ ಪ್ರವೇಶಕ್ಕೆ ನಿರ್ಬಂಧ: ಶನಿವಾರ, ಭಾನುವಾರ ಮಾತ್ರ ಪ್ರವೇಶ

ಚಿಕ್ಕಬಳ್ಳಾಪುರ: ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣ ನಂದಿ ಬೆಟ್ಟದ ತುತ್ತ ತುದಿಗೆ ವಾರದ 5 ದಿನಗಳು ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಬೆಟ್ಟದ ಪ್ರವೇಶ ದ್ವಾರದ...

ತಾಯಿ-ಮಗಳು ಅನುಮಾನಾಸ್ಪದ ಸಾವು; ಬಾವಿಯಲ್ಲಿ ಪತ್ತೆಯಾದವು ಶವಗಳು, ಮಹಿಳೆಯ ಪತಿ ನಾಪತ್ತೆ

ಕೊಡಗು: ಆಸ್ಸಾಂ ಮೂಲದ ತಾಯಿ-ಮಗಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಕೆ.ಬೈಗೋಡಿನಲ್ಲಿ ನಡೆದಿದೆ. ಇವರಿಬ್ಬರ ಶವವೂ ಬಾವಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಪತಿ ನಾಪತ್ತೆಯಾಗಿದ್ದು ಇನ್ನೂ ಅನುಮಾನವನ್ನು...

ಸೌದಿಯಲ್ಲಿರುವ ಕೇರಳದ 30 ನರ್ಸ್​ಗಳಲ್ಲಿ ಮಾರಣಾಂತಿಕ ಕರೋನಾ ವೈರಸ್​ ಪತ್ತೆ

ತಿರುವನಂತಪುರ: ಚೀನಾದಲ್ಲಿ ಹಲವು ಮಂದಿಯನ್ನು ಬಲಿ ಪಡೆದಿರುವ ಮಾರಣಾಂತಿಕ ಕರೋನಾ ವೈರಸ್​ ಸೌದಿ ಅರೇಬಿಯಾದಲ್ಲಿರುವ ಕೇರಳದ 30 ಮಂದಿ ನರ್ಸ್​ಗಳಲ್ಲಿ ಪತ್ತೆಯಾಗಿದೆ ಎಂದು...

ರೈಲು ಸಂಚಾರ ನಿರಂತರ

ಶಿವಮೊಗ್ಗ: ಶಿವಮೊಗ್ಗದಲ್ಲಿ ಆರಂಭವಾದ ಎಲ್ಲ ತತ್ಕಾಲ್ ರೈಲುಗಳು ಶಾಶ್ವತವಾಗಿ ಸಂಚರಿಸುತ್ತಿವೆ. ಈಗ ಆರಂಭವಾಗಿರುವ ಶಿವಮೊಗ್ಗ-ಯಶವಂತಪುರ ಎಕ್ಸ್​ಪ್ರೆಸ್ ರೈಲು ಕೂಡ ಮುಂದಿನ ದಿನಗಳಲ್ಲಿ ನಿರಂತರವಾಗಿ...

ಶೇ.50 ರಷ್ಟು ಕರ ವಸೂಲಿ ಮಾಡದಿದ್ದರೆ ಶಿಸ್ತು ಕ್ರಮ

ಬಾಗಲಕೋಟೆ: ಜಿಲ್ಲೆಯಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ ಶೇ.50 ರಷ್ಟು ಕರ ವಸೂಲಿ ಮಾಡದಿದ್ದಲ್ಲಿ ಬಿಲ್ ಕಲೆಕ್ಟರ್‌ಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು...

ಲೋಕೇಶ್.ಎಂ ಐಹೊಳೆ ಜಗಳೂರು
ಒಂದೆಡೆ ಲೋಕಸಭೆ ಚುನಾವಣೆ ಕಾವು ಹೆಚ್ಚುತ್ತಿದ್ದರೆ ಮತ್ತೊಂದೆಡೆ ಪಟ್ಟಣದಲ್ಲಿ ಬೇಸಿಗೆ ಬೇಗೆ, ಕುಡಿವ ನೀರಿಗಾಗಿ ಹಾಹಾಕಾರ ಮುಗಿಲುಮುಟ್ಟಿದೆ.

ಕಳೆದ ಮೂರು ವರ್ಷಗಳಿಂದ ಕುಡಿವ ನೀರಿಗಾಗಿ ಪಪಂ ವಿವಿಧ ಯೋಜನೆಗಳಡಿ ಕೋಟ್ಯಂತರ ರೂ. ಹಣ ವ್ಯಯಿಸಿದ್ರೂ ನಳಗಳ ಮುಂದೆ ಕುಡಿವ ನೀರಿಗೆ ಬಿಂದಿಗೆ ಹಿಡಿದು ಸಾರ್ವಜನಿಕರು ದಿನವಿಡೀ ಕಾಯುವ ಸ್ಥಿತಿ ಸಾಮಾನ್ಯ ದೃಶ್ಯವಾಗಿದೆ. ಕೇವಲ 5 ಕಿಮೀ ಸುತ್ತಳತೆಯ ಜಗಳೂರು ಪಟ್ಟಣದಲ್ಲಿ 18 ವಾರ್ಡ್‌ಗಳಿವೆ. ಎಲ್ಲ ಕಡೆ ನೀರಿಗಾಗಿ ಹಾಹಾಕಾರವಿದೆ. ಇಷ್ಟಕ್ಕೆಲ್ಲ ಪಪಂ ಬೇಜವಾಬ್ದಾರಿಯೇ ಕಾರಣವೆಂಬುದು ಸ್ಥಳೀಯರ ದೂರು.

ಎಸ್‌ಎಫ್‌ಸಿ ಯೋಜನೆಯಡಿ ಕುಡಿವ ನೀರಿಗೆ ಸಾಕಷ್ಟು ಅನುದಾನ ಬಂದಿದೆ. ಈ ಹಣವನ್ನು ಕುಡಿವ ನೀರು ಪೂರೈಕೆಗಷ್ಟೇ ಬಳಸಬೇಕೆಂಬ ಮಾರ್ಗಸೂಚಿಯೂ ಇದೆ. ಆದರೆ, ಪಟ್ಟಣದಲ್ಲಿ ಕೊಳವೆಬಾವಿ ಕೊರೆಸದಂತೆ ಜಿಲ್ಲಾಧಿಕಾರಿ ಫರ್ಮಾನು ಹೊರಡಿಸಿದ್ದು, ಹೊಸ ಬೋರ್ ಕೊರೆಯಲು ಅವಕಾಶವಿಲ್ಲದಾಗಿದೆ. ಆದರೆ, ರಿಪೇರಿ, ಪೈಪ್‌ಲೈನ್, ನಿರ್ವಹಣೆ, ಇತ್ಯಾದಿಗಳನ್ನು ಮಾಡಲು ಅವಕಾಶವಿದೆ.

ಬೋರ್‌ವೆಲ್ ಕೊರೆಯಬಾರದೆಂಬ ಸರ್ಕಾರದ ಕಟ್ಟಾಜ್ಞೆ ಇದ್ದರೂ, ಆಡಳಿತಾಧಿಕಾರಿಗಳು ನಿಯಮ ಗಾಳಿಗೆ ತೂರಿ, 16 ಬೋರ್‌ವೆಲ್ ಕೊರೆಯಲು ಅನುಮತಿ ನೀಡಿದ್ದಾರೆ. ಇದರ ಉದ್ದೇಶವೇನೆಂಬುದು ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿದೆ.

ಬಿಡುಗಡೆಯಾದ ಅನುದಾನ ಲೆಕ್ಕಕ್ಕೆ ಸಿಗುತ್ತಿಲ್ಲ: 2017-18, 2018-19 ಮತ್ತು 2019-20ನೇ ಸಾಲಲ್ಲಿ ಕುಡಿವ ನೀರಿಗೆ ಬಿಡುಗಡೆಯಾದ ಅನುದಾನದ ಲೆಕ್ಕ ಪಪಂನಲ್ಲಿ ಸಿಕ್ಕುತ್ತಿಲ್ಲ. ರಿಪೇರಿ, ಮೋಟಾರ್‌ಪಂಪ್ ಖರೀದಿ, ಪೈಪ್‌ಲೈನ್ ದುರಸ್ತಿ, ಪೈಪ್‌ಲೈನ್ ವಿಸ್ತರಣೆ ಎಂಬಿತ್ಯಾದಿ ನಿರ್ವಹಣೆಗೆ ಅನುದಾನ ಮಾತ್ರ ನೀರಿನಂತೆ ಖರ್ಚು ಮಾಡಲಾಗಿದೆ.

ಆಡಳಿತಾಧಿಕಾರಿಗಳ ಹಿಡಿತಕ್ಕೆ ಸಿಗದ ಪಪಂ: ಪಟ್ಟಣ ಪಂಚಾಯಿತಿ ಅಧಿಕಾರಿಗಳ ಎಲ್ಲ ಅವೈಜ್ಞಾನಿಕ
ತೀರ್ಮಾನಗಳಿಗೆ ಆಡಳಿತಾಧಿಕಾರಿಗಳು ಅಸ್ತು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆಡಳಿತ ಮಂಡಳಿ ರಚನೆಯಾಗದೇ ಆಡಳಿತಾಧಿಕಾರಿಗಳ ಅಧೀನದ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿಗಳ ತೀರ್ಮಾನವೇ ಅಂತಿಮವೆಂಬಂತಾಗಿದೆ. 16 ಬೋರ್‌ವೆಲ್‌ಗಳ ಕೊರೆಸಿ ರುವುದನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಬರಪೀಡಿತ ತಾಲೂಕೆಂದು ಘೋಷಣೆ ಮಾಡಿ ಕುಡಿವ ನೀರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದರೆ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿ ಹಣ ದುರ್ಬಳಕೆ ಮಾಡಿಕೊಂಡು ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಪರಿಸ್ಥಿತಿ ಸರಿಯಾಗದಿದ್ದರೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುತ್ತೇವೆ.
ನಾಗರಾಜ್, ಪ್ರಕಾಶ್, ರವಿಕುಮಾರ, ರಮೇಶ್

ಶಾಂತಿಸಾಗರದ ಪೈಪ್‌ಲೈನ್ ಒಡೆದಿದೆ. ಕೂಡಲೇ ದುರಸ್ತಿಪಡಿಸಲಾಗುವುದು. ಕುಡಿವ ನೀರಿಗೆ ಬಿಡುಗಡೆಯಾದ 15 ಲಕ್ಷ ರೂ. ಗಳಲ್ಲಿ ಕೊಳವೆಬಾವಿ ಕೊರೆಸಲಾಗಿದ್ದು, ಮೋಟರ್ ಪಂಪ್‌ಸೆಟ್ ಅಳವಡಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು.
ಕಂಪಳಮ್ಮ ಮುಖ್ಯಾಧಿಕಾರಿ
ಪಟ್ಟಣ ಪಂಚಾಯಿತಿ ಜಗಳೂರು

ಕುಡಿಯುವ ನೀರಿನ ಕೃತಕ ಅಭಾವ ಸೃಷ್ಠಿ
ಸೂಳೆಕೆರೆಯಿಂದ ಪೈಪ್‌ಲೈನ್ ಮೂಲಕ ಜಗಳೂರಿಗೆ ನೀರು ತರಲಾಗುತ್ತಿದೆ. ಆದರೆ ಪೈಪ್‌ಲೈನ್ ಒಡೆದಿದೆ. ವಿದ್ಯುತ್ ಇಲ್ಲ, ಪಂಪ್‌ಸೆಟ್ ಕೆಟ್ಟಿದೆ ಎಂಬ ನೆಪವೊಡ್ಡಿ ಕುಡಿವ ನೀರಿನ ಕೃತಕ ಅಭಾವ ಸೃಷ್ಟಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಜಿಪಿಎಸ್ ಮಾಡದೇ ಟ್ಯಾಂಕರ್ ನೀರು ಪೂರೈಸಲು ಅಧಿಕಾರಿಗಳು ತುದಿಗಾಲಲ್ಲಿ ನಿಂತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಖಾಸಗಿ ಆರ್‌ಒ ಘಟಕಗಳ ಹಾವಳಿ
ಪಪಂನಿಂದ ನಾಲ್ಕೈದು ಕಡೆ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಆರ್‌ಒ ಘಟಕ ಸ್ಥಾಪಿಸಲಾಗಿದ್ದರೂ ನೀರು ಪೂರೈಕೆ ಮತ್ತು ನಿರ್ವಹಣೆ ಕೊರತೆಯಿಂದ ವರ್ಷದಿಂದಲೂ ಮುಚ್ಚಿದ ಬಾಗಿಲು ತೆರೆದಿಲ್ಲ. ಆದರೆ, ಖಾಸಗಿ ಆರ್‌ಒ ಘಟಕಗಳಿಗೆ ಒಂದು ದಿನವೂ ಬಾಗಿಲು ಮುಚ್ಚಿಲ್ಲ. ದುಬಾರಿ ಬೆಲೆಗೆ ನೀರು ಮಾರಾಟ ಮಾಡುತ್ತಿವೆ. ಅಧಿಕಾರಿಗಳು ಶಾಮೀಲಾಗಿರುವ ಆರೋಪ ಕೇಳಿಬರುತ್ತಿದೆ.

ವಿಡಿಯೋ ನ್ಯೂಸ್

VIDEO| ಇಂದಿರಾ ಜೈಸಿಂಗ್​ ಅಂತಹವರನ್ನು ನಿರ್ಭಯಾ ಅಪರಾಧಿಗಳ ಜತೆ ಜೈಲಿನ...

ನವದೆಹಲಿ: ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರನ್ನು ನಿರ್ಭಯಾ ಪ್ರಕರಣದ ಅಪರಾಧಿಗಳ ಜತೆ ಜೈಲಿನಲ್ಲಿಡಬೇಕು ಎಂದು ನಟಿ ಕಂಗನಾ ರಣಾವತ್​ ಆಕ್ರೋಷ ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪ್ರಕರಣವನ್ನು ಸಂತ್ರಸ್ಥೆ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂಬ...

VIDEO| ಪ.ಬಂಗಾಳದಲ್ಲಿ ಮೂರೇ ವರ್ಷ ಹಿಂದೆ 165 ಕೋಟಿ ರೂ....

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದ ಸಾರೆಂಗಾದಲ್ಲಿ ಕೇವಲ ಮೂರೇ ವರ್ಷ ಹಿಂದ 165 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಒಂದು ಬುಧವಾರ ಅಪರಾಹ್ನ ಕುಸಿದು ಬಿದ್ದಿದೆ....

VIDEO| ಗಗನಯಾನಕ್ಕೆ ವ್ಯೋಮಮಿತ್ರಾ; ಇಸ್ರೋದಿಂದ ರೋಬಾಟ್ ಅನಾವರಣ, ವರ್ಷಾಂತ್ಯಕ್ಕೆ ಪ್ರಯಾಣ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮ ಗಳಲ್ಲೊಂದಾದ ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಪ್ರಯಾಣ ಬೆಳೆಸಲಿರುವ ರೋಬಾಟ್ ‘ವ್ಯೋಮಮಿತ್ರಾ’ವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಬುಧವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಖಾಸಗಿ ಹೋಟೆಲ್​ನಲ್ಲಿ ‘ಮಾನವಸಹಿತ ಗಗನಯಾನ ಮತ್ತು ಅನ್ವೇಷಣೆ ಕಾರ್ಯಕ್ರಮ’...

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...