ಕುಡಿವ ನೀರಿಗೆ ತುರ್ತು ಕ್ರಮ ಅವಶ್ಯ

ಜಗಳೂರು: ಸಮರ್ಪಕ ಕುಡಿವ ನೀರು ಪೂರೈಕೆ, ಪಶುಭಾಗ್ಯದಲ್ಲಿ ತಾರತಮ್ಯ, ಕೃಷಿ ಹೊಂಡ ನಿರ್ಮಾಣದಲ್ಲಿ ಅಕ್ರಮ, ಜಾತ್ರೆಗಳ ನಿಮಿತ್ತ ಕುಡಿವ ನೀರು ಮತ್ತು ಸ್ವಚ್ಛತೆ ಬಗ್ಗೆ ಮುಂಜಾಗ್ರತೆ, ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್, ನರೇಗಾ ಕೆಲಸ ಮಾಡಿದವರಿಗೆ ಕೂಲಿ ನೀಡುವುದು.

ಇಲ್ಲಿನ ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲ್ಪಟ್ಟ ವಿಷಯಗಳು.

ಬೇಸಿಗೆ ಆರಂಭವಾಗಿದ್ದು, ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ತಾಲೂಕಲ್ಲಿ ಸಾವಿರಾರು ಅಡಿ ಬೋರ್‌ವೆಲ್ ಕೊರೆದರೂ ಹನಿ ನೀರು ಸಿಗುತ್ತಿಲ್ಲ. ಇದರಿಂದ ಲಕ್ಷಾಂತರ ರೂ. ಪೋಲಾಗುತ್ತಿದೆ. ಸಮಸ್ಯೆ ಇರುವೆಡೆ ಟ್ಯಾಂಕರ್ ಮತ್ತು ಖಾಸಗಿ ಬೋರ್‌ಗಳಿಂದ ನೀರು ಪೂರೈಕೆಗೆ ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತೀರಾ ಸಮಸ್ಯೆ ಇರುವೆಡೆ ಇಒ, ತಹಸೀಲ್ದಾರ್ ಜತೆಗೂಡಿ ಭೇಟಿ ನೀಡಿ, ಸ್ಥಳದಲ್ಲೇ ಪರಿಹಾರ ನೀಡಲಾಗುವುದೆಂದು ಜಿಪಂ ಎಇಇ ಬಾಲಸ್ವಾಮಿ ತಿಳಿಸಿದರು.