Immunity: ನಿಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ, ಅಡುಗೆಮನೆಯಲ್ಲಿರುವ ಅರಿಶಿನ ಮತ್ತು ಶುಂಠಿ ಪದಾರ್ಥಗಳು ಅದನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ ಬೆಳಿಗ್ಗೆ ಕಾಫಿ ಅಥವಾ ಚಹಾದಂತಹ ಪಾನೀಯಗಳನ್ನು ಕುಡಿಯುತ್ತಿದ್ದರೆ,
ಅದಕ್ಕೆ ಅರಿಶಿಣ ಮತ್ತ ಶುಂಠಿಯನ್ನು ಹಾಕಿ ಕುಡಿದರೆ ನಿಮ್ಮಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಬನ್ನಿ ತಿಳಿಯೋಣ.

ಸಾಂಪ್ರದಾಯಿಕವಾಗಿ ಅಡುಗೆಮನೆಯಲ್ಲಿ ಬಳಸುವ ಶುಂಠಿ ಮತ್ತು ಅರಿಶಿನ ಎರಡೂ ಔಷಧೀಯ ಗುಣಗಳಿಂದ ಕೂಡಿದೆ. ಇವೆರಡೂ ಪ್ರಮುಖ ಗಿಡಮೂಲಿಕೆಗಳಾಗಿದ್ದು, ತಲೆನೋವಿನಿಂದ ಹಿಡಿದು ದೀರ್ಘಕಾಲದ ಉರಿಯೂತ ಮತ್ತು ಆಯಾಸದವರೆಗೆ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇವು ಬಳಸಲ್ಪಡುತ್ತವೆ.
ಪ್ರಯೋಜನಗಳು
1. ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ
ಶುಂಠಿ ಮತ್ತು ಅರಿಶಿನವು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವುಗಳಲ್ಲಿರುವ ಉರಿಯೂತ ನಿವಾರಕ ಗುಣಗಳು ನೋವನ್ನು ಕಡಿಮೆ ಮಾಡಿ ರೋಗಗಳಿಂದ ರಕ್ಷಿಸುತ್ತವೆ.
2.ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ
ಹೊಟ್ಟೆಯ ಸಮಸ್ಯೆಗಳಿಗೆ ಶುಂಠಿ ಮತ್ತು ಅರಿಶಿನ ಒಳ್ಳೆಯದು. ಇವು ವಾಕರಿಕೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಶುಂಠಿಯಲ್ಲಿರುವ ಜಿಂಜರಾಲ್‌ಗಳು ಮತ್ತು ಶೋಗೋಲ್‌ಗಳಂತಹ ಪದಾರ್ಥಗಳು ಹೊಟ್ಟೆಯನ್ನು ವೇಗವಾಗಿ ಖಾಲಿ ಮಾಡಬಹುದು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅರಿಶಿನವು ಆಮ್ಲೀಯತೆಗೆ ಸಹಾಯ ಮಾಡುತ್ತದೆ. ಆದರೆ ಅದನ್ನು ಮಿತವಾಗಿ ತೆಗೆದುಕೊಳ್ಳಬೇಕು.
3.ನೋವಿಗೆ ಅತ್ಯತ್ತಮ ಪರಿಹಾರ
ಕೆಲವರಿಗೆ ಬೆಳಿಗ್ಗೆ ಎದ್ದಾಗ ಬೆನ್ನು ನೋವು, ಕೀಲು ನೋವು ಮತ್ತು ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಅಂತವರು ಶುಂಠಿ ಮತ್ತು ಅರಿಶಿನದಿಂದ ತಯಾರಿಸಿದ ಈ ಪಾನೀಯವು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4.ಮೆದುಳನ್ನು ಸಕ್ರಿಯವಾಗಿರಿಸುತ್ತದೆ
ಬೆಳಿಗ್ಗೆ ಅರಿಶಿನ-ಶುಂಠಿ ಪಾನೀಯವನ್ನು ಕುಡಿಯುವುದರಿಂದ ದಿನವಿಡೀ ನಿಮ್ಮ ಮೆದುಳು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಮೆದುಳಿನ ಶಕ್ತಿಯನ್ನು ಸುಧಾರಿಸುತ್ತದೆ. ಅಲ್ಲದೆ, ಅರಿಶಿನ ಶುಂಠಿ ಪಾನೀಯವು ನರಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ರಕ್ಷಿಸುತ್ತದೆ. ಮೆದುಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ದಿನವಿಡೀ ಚೈತನ್ಯಶೀಲರಾಗಿರಲು ನೀವು ಬೆಳಿಗ್ಗೆ ಒಂದು ಕಪ್ ಇದನ್ನು ಕುಡಿಯಬಹುದು. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.