ರೈಲ್ವೆ ಸ್ಟೇಶನ್​​ನಲ್ಲಿ ಡಿಆರ್​ಐ ಬಳಿ ಸಿಕ್ಕಿಬಿದ್ದ ಸ್ಮಗ್ಲರ್ಸ್​; 43 ಕೋಟಿ ರೂ.ಮೌಲ್ಯದ ಚಿನ್ನ ವಶ

ನವದೆಹಲಿ: ಕಳ್ಳ ಸಾಗಣೆ ಮಾಡಲಾಗುತ್ತಿದ್ದ 43 ಕೋಟಿ ರೂ.ಮೌಲ್ಯದ 504 ಚಿನ್ನದ ಗಟ್ಟಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ) ಶುಕ್ರವಾರ ವಶಪಡಿಸಿಕೊಂಡಿದ್ದು, ಎಂಟು ಜನರನ್ನು ಬಂಧಿಸಿದೆ. ಈ ಚಿನ್ನದ ಗಟ್ಟಿಗಳು ವಿದೇಶಿ ಮೂಲದ್ದು ಎಂದು ಮಾಹಿತಿ ನೀಡಿದೆ. ಇಲ್ಲಿಯವರೆಗೆ ವಶಪಡಿಸಿಕೊಂಡ ಚಿನ್ನದ ಸರಕುಗಳಲ್ಲಿ, ಇದೇ ಅತಿ ಹೆಚ್ಚು ಮೌಲ್ಯದ್ದು ಎಂದು ಡಿಆರ್​ಐ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಶುಕ್ರವಾರ ಡಿಬ್ರುಗಢ್​-ನವದೆಹಲಿ ರಾಜಧಾನಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಬಂದ ಎಂಟು ಮಂದಿಯ ಬಳಿ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದರು. … Continue reading ರೈಲ್ವೆ ಸ್ಟೇಶನ್​​ನಲ್ಲಿ ಡಿಆರ್​ಐ ಬಳಿ ಸಿಕ್ಕಿಬಿದ್ದ ಸ್ಮಗ್ಲರ್ಸ್​; 43 ಕೋಟಿ ರೂ.ಮೌಲ್ಯದ ಚಿನ್ನ ವಶ