ಮಹಾರಾಜ ಟ್ರೋಫಿಗೆ ದ್ರಾವಿಡ್​ ಪುತ್ರ ಪದಾರ್ಪಣೆ; ಮೈಸೂರು ವಾರಿಯರ್ಸ್​ಗೆ ರೋಚಕ ಜಯ

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಾಲಿ ರನ್ನರ್​ಅಪ್​ ಮೈಸೂರು ವಾರಿಯರ್ಸ್​ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೊದಲ ದಿನದ ಮಳೆಬಾಧಿತ 2ನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್​ ವಿರುದ್ಧ 7 ರನ್​ಗಳಿಂದ ರೋಚಕ ಜಯ ಸಾಧಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಮೈಸೂರು, 8 ವಿಕೆಟ್​ಗೆ 159 ರನ್​ ಪೇರಿಸಿತು. ಕೆ. ಗೌತಮ್​ (21), ಮನೋಜ್​ ಭಾಂಡಗೆ (42*) ಉತ್ತಮ ಕೊಡುಗೆ ನೀಡಿದರು. ನಂತರ ಸುರಿದ ಮಳೆಯಿಂದಾಗಿ ಶಿವಮೊಗ್ಗಕ್ಕೆ 9 ಓವರ್​ಗಳಲ್ಲಿ 88 ರನ್​ ಗಳಿಸುವ ಪರಿಷತ ಗುರಿ ನೀಡಲಾಯಿತು. ಅಭಿನವ್​ ಮನೋಹರ್​ (52*) ಹೋರಾಟದ ನಡುವೆ ಶಿವಮೊಗ್ಗ 5 ವಿಕೆಟ್​ಗೆ 80 ರನ್​ ಗಳಿಸಲಷ್ಟೇ ಶಕ್ತವಾಯಿತು.

ದ್ರಾವಿಡ್​ ಪುತ್ರ ಪದಾರ್ಪಣೆ
ಟೀಮ್​ ಇಂಡಿಯಾ ಮಾಜಿ ಕೋಚ್​, ದಿಗ್ಗಜ ಬ್ಯಾಟರ್​ ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ದ್ರಾವಿಡ್​ ದಿನದ 2ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ಪರ ಮಹಾರಾಜ ಟ್ರೋಫಿಗೆ ಪದಾರ್ಪಣೆ ಮಾಡಿದರು. ಆದರೆ ಕೇವಲ 7 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು.

ಶುಕ್ರವಾರದ ಪಂದ್ಯಗಳು
ಮಂಗಳೂರು ಡ್ರಾಗನ್ಸ್​-ಹುಬ್ಬಳ್ಳಿ ಟೈಗರ್ಸ್​
ಆರಂಭ: ಮಧ್ಯಾಹ್ನ 3.00
ಬೆಂಗಳೂರು ಬ್ಲಾಸ್ಟರ್ಸ್-ಮೈಸೂರು ವಾರಿಯರ್ಸ್​
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಶುಭಾರಂಭ

TAGGED:
Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…