ಹುನಗುಂದ: ನಾಟಕಗಳು ಜನರಲ್ಲಿ ನೈತಿಕ ಪ್ರಜ್ಞೆ, ಮನರಂಜನೆ ಜತೆಗೆ ಜೀವನ ಮೌಲ್ಯಗಳನ್ನು ಮೂಡಿಸುತ್ತವೆ ಎಂದು ಇಳಕಲ್ಲ ಗುರುಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹೊನ್ನಗುಂದ ಸಂಸ್ಕೃತಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕದಲ್ಲಿನ ದೃಶ್ಯ ಮುನುಷ್ಯನನ್ನು ಹೆಚ್ಚು ಪರಿಣಾಮಕಾರಿ ಆಗಿ ಪರಿವರ್ತನೆ ಮಾಡಬಲ್ಲದು. ನಾಟಕ ಎರಡು ಸಾವಿರ ವರ್ಷದ ಇತಿಹಾಸ ಹೊಂದಿದೆ. ಶಿವಸಂಚಾರ ಸಾಣೇಹಳ್ಳಿ ತಂಡದಲ್ಲಿ ಉತ್ತಮ ರಂಗ ಕಲಾವಿದರನ್ನು ಒಳಗೊಂಡಿದ್ದು, ನಾಟಕಗಳು ಉತ್ತಮವಾಗಿ ಮೂಡಿಬರಲಿ ಎಂದು ಆಶಿಸಿದರು.
ಪಿ. ಬಿ. ದುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್. ಕೆ. ಕೊನೆಸಾಗಾರ ಮಾತನಾಡಿ, ರಂಗಭೂಮಿಗೆ ಹುನಗುಂದ ಪಟ್ಟಣ ತವರುಭೂಮಿ. ಇಲ್ಲಿ ಸ್ವತಂತ್ರ ಪೂರ್ವದಲ್ಲೇ ರಂಗ ಚಟುವಟಿಕೆ ಜೋರಾಗಿದ್ದವು. ಹೆಚ್ಚು ಹೆಚ್ಚು ರಂಗ ಚಟುವಟಿಕೆ ಕೈಗೊಂಡಾಗ ರಂಗಭೂಮಿ ಜೀವಂತಿಕೆ ಇರುತ್ತದೆ. ನಿನಾಸಂ ರೀತಿ ಸಾಣೇಹಳ್ಳಿ ರಂಗ ಚಟುವಟಿಕೆ ಮೂಲಕ ಜಗತ್ತಿಗೆ ತೆರೆದುಕೊಳ್ಳುತ್ತಿದೆ ಎಂದರು. ಮಹಾಂತೇಶ ಅಗಸಿಮುಂದಿನ ಸಮಾರೋಪ ಭಾಷಣ ಮಾಡಿದರು.
ಡಾ. ಮಹಾಂತೇಶ ಕಡಪಟ್ಟಿ, ಹೆಸ್ಕಾಂ ಶಾಖಾಧಿಕಾರಿ ದತ್ತು ದಾಯಿಗುಡಿ, ಅಶೋಕ ಭಾವಿಕಟ್ಟಿ, ಮುತ್ತಣ್ಣ ಕಲಗೋಡಿ ಎಸ್. ಆರ್ ಲ್. ಗೋಲಗುಂಡ, ಸಂಗಮೇಶ ಪಾಟೀಲ ಇತರರಿದ್ದರು.