More

  ಪೌರಾಣಿಕ ನಾಟಕಗಳು ಬದುಕಿಗೆ ದಾರಿದೀಪ

  • ಆಲೂರು : ಪೌರಾಣಿಕ ನಾಟಕಗಳು ಬದುಕಿಗೆ ದಾರಿದೀಪವಾಗಿವೆ ಎಂದು ಬೇಲೂರು ಶಾಸಕ ಎಚ್.ಕೆ. ಸುರೇಶ್ ಹೇಳಿದರು. ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಮಗ್ಗೆ ಗ್ರಾಮದಲ್ಲಿ ರಂಗಭೂಮಿ ಹಿರಿಯ ಕಲಾವಿದ, ಶಿಕ್ಷಕ ಡಿ.ವಾಸುದೇವ್ ಹಾಗೂ ಅನಿಲ್ ನೇತೃತ್ವದಲ್ಲಿ ಆಯೋಜಿಸಿದ್ದ ‘ಸಂಪೂರ್ಣ ರಾಮಾಯಣ’ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜ್ಞಾನ ವಿಜ್ಞಾನವಾಗಬೇಕು. ನಾಟಕ, ಸಂಗೀತ ಸೇರಿದಂತೆ ಎಲ್ಲಾ ಕಲೆಗಳ ಮೂಲವಾದ ಜಾನಪದವನ್ನು ಪ್ರಧಾನವಾಗಿ ಪರಿಗಣಿಸಬೇಕು. ರಂಗಭೂಮಿ ಚಟುವಟಿಕೆಗಳಿಗೆ ಬೆಂಬಲಿಸಬೇಕು ಎಂದು ಅವರು ಸಲಹೆ ನೀಡಿದರು.
   ಮೈಸೂರಿನ ಯದುವಂಶದ ರಾಜರು ಕಲೆ, ಸಂಗೀತ, ಸಾಹಿತ್ಯಕ್ಕೆ ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ನೀಡಿದರು. ಜಗತ್ತಿನ ಪ್ರಮುಖ ಪ್ರಾಚೀನ ನಾಗರಿಕತೆ ತಾಣಗಳಲ್ಲಿ ನಾಟಕ ಪ್ರದರ್ಶನವೂ ಕಲಾಭಿವ್ಯಕ್ತಿಯ ಮಾಧ್ಯಮವಾಗಿತ್ತು ಎಂಬುದು ಗಮನೀಯ ಎಂದರು.
  See also  ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಸಾಧನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts