ರಾಮನಗಿಂಡಿ ಬೀಚ್‌ನಲ್ಲಿ ‘ಡ್ರಾಗನ್’ ಚಿತ್ರೀಕರಣ

blank

ಕುಮಟಾ: ಬೆರಗುಗೊಳಿಸುವ ಸೌಂದರ್ಯದಿಂದ ಸದಾ ಸಿನಿಮಾ ನಿರ್ಮಾಪಕರನ್ನು ಆಕರ್ಷಿಸುತ್ತಿರುವ ಕುಮಟಾ ತಾಲೂಕಿನ ಧಾರೇಶ್ವರದ ರಾಮನಗಿಂಡಿ ಬೀಚ್ ಇನ್ನೂ ಹೆಸರು ಘೋಷಿಸಿರದ ಬಹುಭಾಷಾ ಸಿನಿಮಾವೊಂದರ ಚಮತ್ಕಾರಿ ಚಿತ್ರೀಕರಣಕ್ಕೆ ಆತಿಥ್ಯ ವಹಿಸುತ್ತಿದೆ. ಹೆಸರಾಂತ ತೆಲುಗು ನಟ ಜೂನಿಯರ್ ಎನ್‌ಟಿಆರ್ ಮತ್ತು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ರಾಮನಗಿಂಡಿ ಬೀಚ್‌ನಲ್ಲಿ ತಂಗಿದ್ದು, ಬಹುನಿರೀಕ್ಷಿತ ಪ್ಯಾನ್ ವರ್ಲ್ಡ್ ಬಹುಕೋಟಿ ಸಿನಿಮಾ ಯೋಜನೆಯ ಚಿತ್ರೀಕರಣದ ಅಂತಿಮ ಹಂತದಲ್ಲಿದ್ದಾರೆ.

blank

ಅರ್ಧಚಂದ್ರಾಕಾರದ ರಾಮನಗಿಂಡಿ ಬೀಚ್ ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ಪ್ರದೇಶವಾದರೂ ಕನ್ನಡ ಚಲನಚಿತ್ರಗಳು ಇಲ್ಲಿ ಚಿತ್ರೀಕರಣವಾಗಿದ್ದು ತೀರಾ ಕಡಿಮೆ. ಆದರೆ ತಾತ್ಕಾಲಿಕವಾಗಿ ಡ್ರ್ಯಾಗನ್ ಎಂದು ಹೆಸರಿಸಲಾದ ಸಿನಿಮಾಕ್ಕೆ ರಾಮಾನಗಿಂಡಿ ಬೀಚ್‌ನ ವಿಸ್ತಾರವಾದ ತೀರ, ಪ್ರಶಾಂತ ಹಸಿರು ಹಿನ್ನೆಲೆ ಸಿನಿಮಾದ ಸಾಂದರ್ಭಿಕ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ್ದಾಗಿದೆ ಎಂದು ಚಿತ್ರೀಕರಣ ತಂಡವನ್ನು ಆಕರ್ಷಿಸಿದೆ. ಹೀಗಾಗಿ ತಿಂಗಳ ಹಿಂದೆಯೇ ಇಲ್ಲಿಗೆ ಬಂದಿರುವ ಚಿತ್ರೀಕರಣದ ಕಲಾವಿಭಾಗ ಹಳೆಯ ಬಂದರು ಮಾದರಿಯ ಬೃಹತ್ ಸೆಟ್‌ನ್ನು ಸಜ್ಜುಗೊಳಿಸಿದೆ. ಹಳೆಯ ಕಾಲದ ಬೋಟು, ಸಮುದ್ರ ಜಟ್ಟಿ, ಬಂದರು ಕಟ್ಟಡಗಳು, ಮನೆ, ಹಳೆಯ ಓಣಿಗಳು, ರೈಲುಹೆಲಿಕಾಪ್ಟರ್ ಮುಂತಾದ ಮಾದರಿಗಳನ್ನು ಒಳಗೊಂಡಿದೆ.

ಟ್ರ್ಯಾಗನ್ ಚಿತ್ರದ ಕ್ಲೈಮಾಕ್ಸ ಆ್ಯಕ್ಷನ್ ಹಾಗೂ ಹಾಡುಗಳಿಗೆ ಸಂಬಂಧಿಸಿದ ಚಿತ್ರೀಕರಣ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಉಳಿದಂತೆ ಇಲ್ಲಿನ ಚಿತ್ರೀಕರಣಕ್ಕಾಗಿಯೇ ತಮ್ಮ ತೂಕವನ್ನು 18 ಕೆಜಿ ಕರಗಿಸಿಕೊಂಡಿರುವ ನಾಯಕ ಜೂ. ಎನ್‌ಟಿಆರ್ ಮೂರು ದಿನದ ಹಿಂದೆಯೇ ರಾಮನಗಿಂಡಿಗೆ ಬಂದಿದ್ದು ಹೊಸ ಅವತಾರದಲ್ಲಿ ದೊಡ್ಡ ಪ್ರಮಾಣದ ಸ್ಟಂಟ್ಸಗಳನ್ನು ಮಾಡುತ್ತಿದ್ದಾರಂತೆ. ಸುಮಾರು 15 ದಿನಗಳ ಕಾಲ ಚಿತ್ರೀಕರಣ ನಡೆಸುವ ಮಾಹಿತಿ ಇದೆ. ಚಿತ್ರೀಕರಣ ಪ್ರಯುಕ್ತ ರಾಮನಗಿಂಡಿ ಬೀಚ್‌ನಲ್ಲಿ ಹೆಚ್ಚಿನ ಸುರಕ್ಷಾ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರಿಗೆ ಚಿತ್ರೀಕರಣ ಸೆಟ್‌ಗೆ ಪ್ರವೇಶ ನಿರಾಕರಿಸಲಾಗುತ್ತಿದೆ.

Share This Article

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…