More

    ಶಿಕ್ಷಕರ ಕಡ್ಡಾಯ ವರ್ಗಾವಣೆ ಕಾಯ್ದೆ ಕರಡು ಪ್ರತಿ ಸಿದ್ಧ

    ಬೆಂಗಳೂರು: ಶಿಕ್ಷಕರ ಕಡ್ಡಾಯ ವರ್ಗಾವಣೆ ಕಾಯ್ದೆಯಲ್ಲಿ ತಿದ್ದುಪಡಿ ತರುವ ಮೂಲಕ ಹೆಸರು ಬದಲು ಮಾಡುವುದು ಸೇರಿ ಹಲವು ನಿಯಮ ಸೇರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಕುರಿತು ಸಚಿವ ಎಸ್. ಸುರೇಶ್​ಕುಮಾರ್ ಮಂಗಳವಾರ ಶಿಕ್ಷಕರು ಮತ್ತು ಶಿಕ್ಷಕ ಸಂಘಟನೆಗಳ ಅಧ್ಯಕ್ಷರ ಜತೆ ರ್ಚಚಿಸಿದ್ದಾರೆ.

    ಕರಡು ಪ್ರತಿಯಲ್ಲೇನಿದೆ?: ಕಡ್ಡಾಯ ವರ್ಗಾವಣೆ ತೆಗೆದು ವಲಯ ವರ್ಗಾವಣೆ ಎಂದು ಮರು ನಾಮಕರಣ. ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ವರ್ಗಾವಣೆ ಕಾಯ್ದೆ ಮತ್ತು ನಿಯಮಗಳನ್ನು ನೀಡಲಾಗಿದ್ದ ವಿಶೇಷ ವಿನಾಯಿತಿ ಹಾಗೂ ಶೇ.20ಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳಿರುವ ತಾಲೂಕುಗಳಿಗೆ ಮಾತ್ರ ವರ್ಗಾವಣೆ ಮಾಡಬೇಕು ಎನ್ನುವ ಮಾನದಂಡ ಕೈಬಿಡಲಾಗಿದೆ. ವಲಯ ವರ್ಗಾವಣೆಯಲ್ಲಿ 50 ವರ್ಷ ಮೀರಿದ ಶಿಕ್ಷಕಿಯರು, 55 ವರ್ಷ ಮೀರಿದ ಶಿಕ್ಷಕರಿಗೆ ವಿನಾಯಿತಿ ನೀಡುವ ಪ್ರಸ್ತಾಪ. ವಿಶೇಷ ಪ್ರಕರಣಗಳನ್ನು ಶೇ.15ರ ವರ್ಗಾವಣೆ ಮಿತಿಯಿಂದ ಹೊರಗಿಡಲಾಗಿದೆ.

    ಪತಿ-ಪತ್ನಿ ಪ್ರಕರಣಗಳಲ್ಲಿ ಸರ್ಕಾರದ ಸಾಮಾನ್ಯ ವರ್ಗಾವಣೆ ನೀತಿಯಲ್ಲಿರುವಂತೆ ಕೇವಲ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಉಳಿದ ಎಲ್ಲ ಪ್ರಕರಣ ಕೈ ಬಿಟ್ಟಿದೆ. ಸಮಗ್ರ ಹೊಸ ಕಾಯ್ದೆ, ನಿಯಮಗಳ ಕರಡನ್ನು ಮೇಲ್ಮನೆ ಸದಸ್ಯರಿಗೆ ಸಲ್ಲಿಸಿ, ಸಲಹೆ ಪಡೆದು ಬಳಿಕ ಪರಿಷತ್​ನಲ್ಲಿ ಮಂಡಿಸಲು ಇಲಾಖೆ ನಿರ್ಧರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts