ಬ್ರಹ್ಮದೇವನಮಡು: ಮಹಾತ್ಮರ ಆದರ್ಶಗಳು ನಮಗೆ ದಾರಿದೀಪ. ಅವುಗಳನ್ನು ಮೈಗೂಡಿಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಜೇವರ್ಗಿ ತಾಲೂಕಿನ ಸುಕ್ಷೇತ್ರ ಮಾಗಣಗೇರಿಯ ಬೃಹನ್ಮಠದ ಶಿವಾಚಾರ್ಯ ರತ್ನ ಡಾ.ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.
ಸಿಂದಗಿ ತಾಲೂಕಿನ ಸುಕ್ಷೇತ್ರ ಹೊನ್ನಳ್ಳಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೀರಘಂಟೈ ಮಡಿವಾಳೇಶ್ವರ ಮಠದ ಮಹಾದ್ವಾರ ಬಾಗಿಲು ಉದ್ಘಾಟನೆ, ಕಲಶಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಹಬ್ಬಗಳು ಜನರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡಿದಾಗ ಮಾತ್ರ ಧಾರ್ಮಿಕ ಆಚರಣೆಗೆ ಮಹತ್ವ ಬರುತ್ತದೆ. ಪ್ರತಿ ಧಾರ್ಮಿಕ ಕಾರ್ಯವನ್ನು ಸೋದರತ್ವ, ಭಾವೈಕ್ಯದಿಂದ ಆಚರಿಸಬೇಕು. ಜಾತಿ-ಮತ ಎಣಿಸದೆ ಸರ್ವರು ಒಂದೇ ಎಂಬ ಭಾವದಿಂದ ಬಾಳಿದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಶ್ರೀಮಠದ ಗುರುಲಿಂಗಯ್ಯ ಸ್ವಾಮೀಜಿ ಅಧ್ಶಕ್ಷತೆ ವಹಿಸಿದ್ದರು. ಪ್ರವಚನಕಾರ ಗುರುಪಾದಯ್ಯ ಶಾಸ್ತ್ರಿಗಳು ಹಿರೇಮಠ ಮಾತನಾಡಿದರು. ಅಯ್ಯಪ್ಪಯ್ಶ ಗದ್ದಗಿಮಠ, ಗೋಲ್ಲಾಳಪ್ಪಗೌಡ ಪೋಲಿಸ್‌ಪಾಟೀಲ ಢವಳಾರ, ಗ್ರಾಪಂ ಮಾಜಿ ಅಧ್ಯಕ್ಷ ಗುರುಲಿಂಗಪ್ಪ ಸಜ್ಜನ, ಸೋಮಣ್ಣ ಕೊಡಂಗಲ್‌ಲ್, ಪ್ರಭಾಕರ ಪತ್ತಾರ, ಆನಂದ ಗೌಡರ, ಶ್ರೀಶೈಲ ಕೋರಿ, ಬಂದಗಿಸಾಬ ತಾಳಿಕೋಟಿ, ಗುರು ಪಾಟೀಲ, ಆನಂದ ತಳವಾರ ಇತರರಿದ್ದರು. ಪತ್ರಕರ್ತ ಮಲ್ಲು ಕೆಂಭಾವಿ ಅವರನ್ನು ಮಾಗಣಗೇರ ಶಿವಾಚಾರ್ಯ ರತ್ನ ಡಾ.ವಿಶ್ವರಾಧ್ಶ ಶಿವಾಚಾಯರು ಸನ್ಮಾನಿಸಿದರು.