ಹುಕ್ಕೇರಿ: ದಿ.ವಿಶ್ವನಾಥ ಕತ್ತಿ ಮುತ್ಸದ್ದಿ ರಾಜಕಾರಣಿ

ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಸಹಕಾರಿ ರೂವಾರಿ, ಮಾಜಿ ಶಾಸಕ ದಿ.ವಿಶ್ವನಾಥ ಕತ್ತಿ ಅವರ 34ನೇ ಪುಣ್ಯಸ್ಮರಣೆ ಕಾರ್ಯಕ್ರಮ ಬುಧವಾರ ಜರುಗಿತು.

ವೈದ್ಯ ನೇಮಿರಾಜ ದಸ್ತೆನ್ನವರ ಮಾತನಾಡಿ, ವಿಶ್ವನಾಥ ಕತ್ತಿ ಅವರು ಮುತ್ಸದ್ದಿ ರಾಜಕಾರಣಿ ಆಗಿದ್ದರು. ಬಡವರ, ನಿರ್ಗತಿಕರ, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಶಾಸಕ ಉಮೇಶ ಕತ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಕೂಡ ತಂದೆಯ ದಾರಿಯಲ್ಲಿ ನಡೆಯುತ್ತಿದ್ದಾರೆ ಎನ್ನುವುದಕ್ಕೆ ಸೇರಿದ ಸಾವಿರಾರು ಜನರೇ ಸಾಕ್ಷಿ ಎಂದರು.

ಗ್ರಾಮದ ಸಮಾ ಸ್ಥಳದಲ್ಲಿ ಕತ್ತಿ ಕುಟುಂಬದ ಸದಸ್ಯರು, ಅಭಿಮಾನಿಗಳು ಪೂಜೆ ಸಲ್ಲಿಸಿದರು. ನಂತರ ಪುತ್ರರಾದ ಶಾಸಕ ಉಮೇಶ ಕತ್ತಿ, ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ, ಮೊಮ್ಮಕ್ಕಳಾದ ಜಿಲ್ಲಾ ಪಂಚಾಯಿತಿ ಸದಸ್ಯ ಪವನ ಕತ್ತಿ, ಉದ್ಯಮಿ ಪೃಥ್ವಿ ಕತ್ತಿ ಸಮಾಗೆ ಪುಷ್ಟಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ಸಹಕಾರಿಗಳು, ಜನಪ್ರತಿನಿಗಳು ಸರದಿಯಲ್ಲಿ ನಿಂತು ಸಮಾಗೆ ನಮನ ಸಲ್ಲಿಸಿದರು.

ಹಿರಾಶುಗರ್ ಕಾರ್ಖಾನೆ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ನಿರ್ದೇಶಕ ಶಿವನಾಯಿಕ ನಾಯಿಕ, ಎಂ.ಡಿ.ಅಶೋಕ ಪಾಟೀಲ, ಸಂಗಮ ಶುಗರ್ ಅಧ್ಯಕ್ಷ ರಾಜೇಂದ್ರ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ, ಸ್ಥಾನಿಕ ಅಭಿಯಂತ ನೇಮಿನಾಥ ಖೇಮಲಾಪುರೆ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಚಯ್ಯ ಹಿರೇಮಠ, ನಿರ್ದೇಶಕ ರಮೇಶ ಕುಲಕರ್ಣಿ, ಗುತ್ತಿಗೆದಾರ ಅಪ್ಪಾಸಾಬ ಶಿರಗೂರ, ಜಯಸಿಂಗ್ ಸನದಿ, ಅರ್ಬನ್ ಬ್ಯಾಂಕ್ ಜನರಲ್ ಮ್ಯಾನೇಜರ್ ಸುಜಿತ ಕತ್ತಿ, ಕಾಡಯ್ಯ ಪೂಜೇರಿ, ದಿಲೀಪ ವಾಳಿಖಿಂಡಿ ಇದ್ದರು.