ಬೆಳಗಾವಿಯಲ್ಲಿ ಎಸಿಪಿಆರ್ ನೂತನ ಗ್ರಂಥಾಲಯ ಉದ್ಘಾಟಿಸಿದ ಡಾ. ವಿಜಯ ಸಂಕೇಶ್ವರ

ಬೆಳಗಾವಿ: ನಗರದ ಅಕಾಡೆಮಿ ಆಫ್​ ಕಂಪೇರಿಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್ (ಎಸಿಪಿಆರ್​) ನ ಗುರುದೇವ ರಾನಡೆ ಮಂದಿರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡಲು ಅನುಕೂಲವಾಗುವಂತೆ ನಿರ್ಮಿಸಿದ ಗ್ರಂಥಾಲಯವನ್ನು ವಿ ಆರ್ ಎಲ್ ಸಮೂಹ ಸಂಸ್ಥೆ ಗಳ ಚೇರಮನ್ ಡಾ. ವಿಜಯ ಸಂಕೇಶ್ವರ ಅವರು ಬುಧವಾರ ಉದ್ಘಾಟಿಸಿದರು.

ಬೆಳಗಾವಿಯ ಹಿಂದುವಾಡೆಯಲ್ಲಿರುವ ಎಸಿಪಿಆರ್ ನ ಗ್ರಂಥಾಲಯ ಉದ್ಘಾಟಿಸಿದ ನಂತರ ಡಾ. ವಿಜಯ ಸಂಕೇಶ್ವರ ಅವರು ಗುರುದೇವ್​ ಡಾ. ಆರ್​.ಡಿ. ರಾನಡೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನೂತನ ಗ್ರಂಥಾಲಯವನ್ನು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಅನಿಲ ಬೆನಕೆ, ಅಶೋಕ ಪೋದ್ದಾರ, ಎಂ.ಬಿ. ಜಿರಲಿ, ಉಧ್ಯಮಿ ಶಿವಕಾಂತ ಸಿದ್ನಾಳ ಮತ್ತು ಇತರರು ಇದ್ದರು. ಕಾರ್ಯಕ್ರಮದಲ್ಲಿ ಡಾ. ವಿಜಯ ಸಂಕೇಶ್ವರ ಅವರನ್ನು ಸನ್ಮಾನಿಸಲಾಯಿತು.