ಭಟ್ಕಳ: ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಡೆಸಿದ ಆಸ್ಪತ್ರೆ ನಿರ್ವಹಣಾ ಕೋರ್ಸ್‌ನಲ್ಲಿ ಪಟ್ಟಣದ ಡಾ. ಸವಿತಾ ಕಾಮತ ಉನ್ನತ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

ಕರ್ನಾಟಕದ 20 ವೈದ್ಯರಲ್ಲಿ 15 ಮಂದಿ ಯಶಸ್ವಿಯಾಗಿ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಈ ಪೈಕಿ ಭಟ್ಕಳ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿರುವ ಡಾ. ಸವಿತಾ ಕಾಮತ್, ಚಿಕ್ಕಬಳ್ಳಾಪುರದ ಡಾ. ರಮೇಶ್ ಮತ್ತು ಬೆಂಗಳೂರಿನ ಡಾ. ರಾಧಾಕೃಷ್ಣ ಅವರು ಉನ್ನತ ಸ್ಥಾನ ಪಡೆದಿದ್ದಾರೆ. ವಿಶೇಷವಾಗಿ, ಡಾ. ಸವಿತಾ ಕಾಮತ ಅವರು ಕೋರ್ಸ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಆಸ್ಪತ್ರೆ ನಿರ್ವಹಣೆಯ ಆಧುನಿಕ ತಂತ್ರಗಳು, ಆರೋಗ್ಯ ಸೇವೆಯ ಗುಣಮಟ್ಟ ಸುಧಾರಣೆ ಮತ್ತು ಆಡಳಿತ ಕೌಶಲಗಳನ್ನು ಕಲಿಯುವ ಈ ಕೋರ್ಸ್, ವೈದ್ಯಕೀಯ ಕ್ಷೇತ್ರದಲ್ಲಿ ನಾಯಕತ್ವ ಮತ್ತು ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಡಾ.ಸವಿತಾ ಕಾಮತ ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು ಉನ್ನತ ಮಟ್ಟಕ್ಕೆ ಏರಿಸುವಲ್ಲಿ ಅಪಾರ ಶ್ರಮವಹಿಸಿದ್ದಾರೆ. ಉತ್ತಮ ವೈದ್ಯರಾಗಿ ಮತ್ತು ಆಡಳಿತಾಧಿಕಾರಿಯಾಗಿ ಡಾ. ಸವಿತಾ ಅವರು ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದ್ದಾರೆ. ಬಿಡುವಿಲ್ಲದ ಸಮಯದಲ್ಲಿ ಉತ್ತಮ ಸಾಧನೆ ತೋರಿದ್ದು ಸಾರ್ವಜನಿಕವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.